ಚಿನ್ನಾಭರಣ ಪ್ರಿಯರಿಗೆ ನೆಮ್ಮದಿ: ವಾರಾಂತ್ಯದಲ್ಲಿ ಏರಿದ್ದ ಚಿನ್ನದ ಬೆಲೆ ಸೋಮವಾರ ಇಳಿಕೆ!

Gold ornaments found while digging land for house construction in Gadag

ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ಏರುಗತಿಯಲ್ಲಿದ್ದ ಚಿನ್ನದ ಬೆಲೆ ವಾರದ ಮೊದಲ ದಿನವಾದ ಸೋಮವಾರ ಕೊಂಚ ತಗ್ಗಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ ಇಂದು ಚಿನ್ನದ ದರದಲ್ಲಿ ಪ್ರತಿ ಗ್ರಾಮ್‌ಗೆ 35 ರೂಪಾಯಿ ಇಳಿಕೆಯಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ.

ಆಭರಣ ಚಿನ್ನದ (22 ಕ್ಯಾರೆಟ್) ಬೆಲೆ ಭಾನುವಾರ ಗ್ರಾಮ್‌ಗೆ 14,010 ರೂಪಾಯಿ ಇತ್ತು. ಆದರೆ ಇಂದು ಸೋಮವಾರದ ವಹಿವಾಟಿನಲ್ಲಿ ಇದು 13,975 ರೂಪಾಯಿಗೆ ಇಳಿದಿದೆ. ಇನ್ನು ಶುದ್ಧ ಚಿನ್ನ ಅಥವಾ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ ಗ್ರಾಮ್‌ಗೆ 15,246 ರೂಪಾಯಿ ದಾಖಲಾಗಿದೆ.

Advertisement

ಇದನ್ನೂ ಓದಿ: ಡೀಸೆಲ್, ATF ರಫ್ತು ಸುಂಕದಲ್ಲಿ ಭಾರಿ ಏರಿಕೆ!

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ಬೆಲೆಯೂ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಒಂದು ಗ್ರಾಮ್ ಬೆಳ್ಳಿಯ ಬೆಲೆ 255 ರೂಪಾಯಿ ಇದೆ. ಆದರೆ ಚೆನ್ನೈ ಸೇರಿದಂತೆ ದಕ್ಷಿಣದ ಕೆಲವು ನಗರಗಳಲ್ಲಿ ಬೆಳ್ಳಿ ದರ ಗ್ರಾಮ್‌ಗೆ 260 ರೂಪಾಯಿ ತಲುಪಿದೆ. ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಬೆಲೆ ಇಳಿಕೆಯಾಗಿರುವುದು ಆಭರಣ ಖರೀದಿದಾರರಲ್ಲಿ ಸಂತಸ ಮೂಡಿಸಿದೆ.

Advertisement

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು