ದೆಹಲಿ: ಆಭರಣ ಪ್ರಿಯರಿಗೆ ಮತ್ತು ಬಂಗಾರ ಖರೀದಿಸಬೇಕೆಂದಿರುವವರಿಗೆ ವಾರದ ಆರಂಭದಲ್ಲೇ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸಲ್ಪ ಇಳಿಕೆ ಕಂಡುಬಂದಿದೆ. ವಾರಾಂತ್ಯದಲ್ಲಿ 25 ರೂಪಾಯಿಗಳಷ್ಟು ತಗ್ಗಿದ್ದ ಬಂಗಾರದ ದರವು, ಇಂದು ಸೋಮವಾರ ಮತ್ತೊಮ್ಮೆ ಪ್ರತಿ 10 ಗ್ರಾಂಗೆ 10 ರೂಪಾಯಿಗಳಷ್ಟು ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯೂ ಸಹ ಇವತ್ತು ದೇಶಾದ್ಯಂತ ಇಳಿಮುಖವಾಗಿದೆ.
ಬೆಂಗಳೂರು ಹಾಗೂ ದೇಶದ ಇಂದಿನ ಚಿನ್ನದ ದರಗಳು:

ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ ತೂಕದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,34,400 ರೂಪಾಯಿ ಆಗಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,46,620 ರೂಪಾಯಿಗಳಾಗಿದೆ. ಬೆಂಗಳೂರಿನಲ್ಲಿಯೂ ಸಹ 22 ಕ್ಯಾರಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 1,34,400 ರೂಪಾಯಿಯಲ್ಲಿ ಸ್ಥಿರವಾಗಿದೆ.
ಕ್ಯಾರೆಟ್ ಆಧಾರಿತ ಇಂದಿನ ದರ ಪಟ್ಟಿ (1 ಗ್ರಾಂಗೆ):
24 ಕ್ಯಾರಟ್ ಚಿನ್ನ (ಶುದ್ಧ ಬಂಗಾರ): 14,662 ರೂ.
22 ಕ್ಯಾರಟ್ ಚಿನ್ನ (ಆಭರಣ ಬಂಗಾರ): 13,440 ರೂ.
18 ಕ್ಯಾರಟ್ ಚಿನ್ನ (ಲೋ ಬಜೆಟ್ ಬಂಗಾರ): 10,997 ರೂ.
ಇದನ್ನೂ ಓದಿ: ಕರ್ನಾಟಕದಲ್ಲಿ ಪರ್ಯಾಯ ವಿದ್ಯುತ್ ವಿತರಣೆ ಜಾಲ: ತೀವ್ರ ವಿರೋಧದ ಬೆನ್ನಲ್ಲೇ ಅರ್ಜಿ ಹಿಂಪಡೆದ ಟಾಟಾ ಪವರ್
ವಿವಿಧ ನಗರಗಳಲ್ಲಿರುವ 1 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ ಹೋಲಿಕೆ:
ದೇಶದ ವಿವಿಧ ನಗರಗಳಿಗೆ ಹೋಲಿಸಿದರೆ ತಮಿಳುನಾಡಿನ ಚೆನ್ನೈ ಹಾಗೂ ದೆಹಲಿಯಲ್ಲಿ ಬಂಗಾರದ ದರ ಕೊಂಚ ಹೆಚ್ಚಾಗಿದೆ. ನಗರವಾರು ಪಟ್ಟಿ ಹೀಗಿದೆ.
| ನಗರಗಳು | 22 ಕ್ಯಾರಟ್ ಚಿನ್ನ (1 ಗ್ರಾಂಗೆ) |
| ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್ | 13,440 ರೂ. |
| ಅಹ್ಮದಾಬಾದ್ | 13,445 ರೂ. |
| ದೆಹಲಿ, ಜೈಪುರ್, ಲಕ್ನೋ | 13,455 ರೂ. |
| ಚೆನ್ನೈ | 13,560 ರೂ. |
ಬೆಳ್ಳಿ ಬೆಲೆಯಲ್ಲೂ ಇಳಿಕೆ:
ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿ ದರವು ಸಹ ಇವತ್ತು ಗ್ರಾಮ್‌ಗೆ 5 ರೂಪಾಯಿಗಳಷ್ಟು ಇಳಿಕೆ ಕಂಡಿದ್ದು, ಪ್ರತಿ ಗ್ರಾಂ ಬೆಳ್ಳಿಯ ಬೆಲೆ 245 ರೂ. ತಲುಪಿದೆ. ಬೆಂಗಳೂರಿನಲ್ಲಿ ಸದ್ಯ 100 ಗ್ರಾಂ ಬೆಳ್ಳಿಯ ಬೆಲೆ 24,500 ರೂಪಾಯಿ ಇದೆ. ಆದರೆ ತಮಿಳುನಾಡು ಮತ್ತು ಕೇರಳದ ಕೆಲವೆಡೆ 100 ಗ್ರಾಂ ಬೆಳ್ಳಿಯ ದರ 25,000 ರೂಪಾಯಿಗಳ ಆಸುಪಾಸಿನಲ್ಲಿದೆ.

