ನವದೆಹಲಿ: ಕಳೆದ ಕೆಲವು ದಿನಗಳಿಂದ ಸಾಲು ಸಾಲಾಗಿ ಏರಿಕೆ ಕಂಡು ಬೆಚ್ಚಿಬೀಳಿಸಿದ್ದ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಕೊಂಚ ಕುಸಿತ ಕಂಡುಬಂದಿದ್ದು, ಖರೀದಿದಾರರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಚಿನ್ನದ ಬೆಲೆ ಗ್ರಾಮ್‌ಗೆ 235 ರೂಪಾಯಿಗಳಷ್ಟು ಇಳಿಕೆಯಾಗಿದ್ದರೆ, ಬೆಳ್ಳಿಯ ದರದಲ್ಲೂ ಗ್ರಾಮ್‌ಗೆ 5 ರೂಪಾಯಿ ಕುಸಿತ ದಾಖಲಾಗಿದೆ. ಎಂಸಿಎಕ್ಸ್ (MCX) ಫ್ಯೂಚರ್ಸ್ ಹಾಗೂ ಸ್ಪಾಟ್ ದರಗಳು ಇಳಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಕುಸಿದಿರುವುದು ದೇಶೀಯ ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ (1 ಗ್ರಾಮ್‌ಗೆ):
24 ಕ್ಯಾರಟ್ (ಅಪರಂಜಿ) ಚಿನ್ನ: ₹14,346 (10 ಗ್ರಾಮ್‌ಗೆ ₹1,43,460)

22 ಕ್ಯಾರಟ್ ಆಭರಣ ಚಿನ್ನ: ₹13,150 (10 ಗ್ರಾಮ್‌ಗೆ ₹1,31,500)
18 ಕ್ಯಾರಟ್ ಚಿನ್ನ: ₹10,759 (10 ಗ್ರಾಮ್‌ಗೆ ₹1,07,590)

ಬೆಳ್ಳಿ ಬೆಲೆ: ₹205 (100 ಗ್ರಾಮ್‌ಗೆ ₹20,500)
ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್‌ಗೆ):
ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ:

ಬೆಂಗಳೂರು: ₹13,150
ಮಂಗಳೂರು: ₹13,150
ಉಡುಪಿ: ₹13,150
ಚಿಕ್ಕಮಗಳೂರು: ₹13,150
ಮೈಸೂರು: ₹13,150
ಇದನ್ನೂ ಓದಿ: ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ದರ 993 ರೂ. ಹೆಚ್ಚಳ
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್‌ಗೆ):
ದೆಹಲಿ, ಜೈಪುರ, ಲಕ್ನೋ: ₹13,165
ಅಹ್ಮದಾಬಾದ್: ₹13,155
ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ: ₹13,150
ಎಂಸಿಎಕ್ಸ್ (MCX) ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ದರ:
ಎಂಸಿಎಕ್ಸ್ ಫ್ಯೂಚರ್ಸ್ (ಡಿ. ೪ ಡೆಲಿವರಿ): ಚಿನ್ನ 1 ಗ್ರಾಮ್‌ಗೆ ₹14,170 ಹಾಗೂ ಬೆಳ್ಳಿ ₹183.
ಭಾರತದ ಸ್ಪಾಟ್ ದರ: ಚಿನ್ನ 1 ಗ್ರಾಮ್‌ಗೆ ₹14,044 ಹಾಗೂ ಬೆಳ್ಳಿ ₹182.
ಅಂತಾರಾಷ್ಟ್ರೀಯ ದರ (Spot Rates): ಸ್ಪಾಟ್ ಗೋಲ್ಡ್ 1 ಗ್ರಾಮ್‌ಗೆ 129.99 ಡಾಲರ್ (ಅಂದಾಜು ₹12,226) ಹಾಗೂ ಸ್ಪಾಟ್ ಸಿಲ್ವರ್ 1 ಗ್ರಾಮ್‌ಗೆ 1.650 ಡಾಲರ್ (ಅಂದಾಜು ₹155) ಆಗಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



