ನೀವು ಅತ್ಯುತ್ತಮ ಫೋಟೋಗ್ರಫಿ ಕ್ಯಾಮೆರಾ ಹಾಗೂ ಕ್ಲೀನ್ ಸಾಫ್ಟ್‌ವೇರ್ ಅನುಭವ ನೀಡುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗಾಗಿ ಅಮೆಜಾನ್‌ನಲ್ಲಿ ಭರ್ಜರಿ ಕೊಡುಗೆಯೊಂದು ಕಾಯುತ್ತಿದೆ. ಗೂಗಲ್‌ನ ಇತ್ತೀಚಿನ ಫ್ಲ್ಯಾಗ್‌ಶಿಪ್ ಫೋನ್ ಆದ ಗೂಗಲ್ ಪಿಕ್ಸೆಲ್ 10 (Google Pixel 10) ಮೇಲೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಈಗ ಭಾರಿ ಬೆಲೆ ಇಳಿಕೆಯನ್ನು ಪ್ರಕಟಿಸಿದೆ.
ಭಾರತದಲ್ಲಿ ಗೂಗಲ್ ಪಿಕ್ಸೆಲ್ 10 ಸ್ಮಾರ್ಟ್‌ಫೋನ್ (12GB RAM + 256GB ಸ್ಟೋರೇಜ್) ಬಿಡುಗಡೆಯಾದಾಗ ಅದರ ಮೂಲ ಬೆಲೆ ₹79,999 ಆಗಿತ್ತು. ಆದರೆ ಪ್ರಸ್ತುತ ಅಮೆಜಾನ್ ಆಫರ್‌ನಲ್ಲಿ ಈ ಪ್ರೀಮಿಯಂ ಫೋನ್ ಕೇವಲ ₹63,770 ಕ್ಕೆ ಲಭ್ಯವಿದೆ. ಇದರರ್ಥ ಗ್ರಾಹಕರಿಗೆ ನೇರವಾಗಿ ₹16,229 ಗಳಷ್ಟು ದೊಡ್ಡ ಮೊತ್ತದ ಹಣ ಉಳಿತಾಯವಾಗಲಿದೆ.

ಗಮನಿಸಬೇಕಾದ ಅಂಶ: ಈ ವಿಶೇಷ ಹಾಗೂ ಬೃಹತ್ ರಿಯಾಯಿತಿಯು ಸದ್ಯಕ್ಕೆ ಕೇವಲ ‘ಇಂಡಿಗೋ’ (Indigo) ಬಣ್ಣದ ಮಾಡೆಲ್‌ಗೆ ಮಾತ್ರ ಅನ್ವಯಿಸುತ್ತದೆ. ಇದರೊಂದಿಗೆ ಬ್ಯಾಂಕ್ ಕಾರ್ಡ್‌ಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಬಳಸಿಕೊಂಡು ಬೆಲೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ಮೊಬೈಲ್ ನೋಟಿಫಿಕೇಶನ್‌ಗಳು ನಿಮ್ಮನ್ನು ರೋಗಿಯನ್ನಾಗಿ ಮಾಡಬಹುದು!
ಗೂಗಲ್ ಪಿಕ್ಸೆಲ್ 10 ಫೀಚರ್ಸ್:
ಡಿಸ್ಪ್ಲೇ: 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿರುವ 6.3 ಇಂಚಿನ ಆಕ್ಟುವಾ (Actua) OLED ಸ್ಕ್ರೀನ್.
ಪ್ರೊಸೆಸರ್: ಗೂಗಲ್‌ನ ಅತ್ಯಾಧುನಿಕ ಹಾಗೂ ಪ್ರಬಲ Google Tensor G5 ಚಿಪ್‌ಸೆಟ್.
ಕ್ಯಾಮೆರಾ: 48MP ಪ್ರಮುಖ ಕ್ಯಾಮೆರಾ, 13MP ಅಲ್ಟ್ರಾವೈಡ್ ಮತ್ತು 10.8MP ಟೆಲಿಫೋಟೋ ಲೆನ್ಸ್ ಒಳಗೊಂಡ ತ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಹಾಗೂ 10.5MP ಸೆಲ್ಫಿ ಕ್ಯಾಮೆರಾ.
ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 16 (Android 16) ಜೊತೆಗೆ ಬರುತ್ತದೆ ಹಾಗೂ ಗೂಗಲ್ ಈ ಫೋನ್‌ಗೆ ಬರೋಬ್ಬರಿ 7 ವರ್ಷಗಳ ಕಾಲ ಸಾಫ್ಟ್‌ವೇರ್ ಮತ್ತು ಸೆಕ್ಯೂರಿಟಿ ಅಪ್ಡೇಟ್‌ಗಳನ್ನು ನೀಡಲಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
