ಮೊಬೈಲ್ ನೋಟಿಫಿಕೇಶನ್‌ಗಳು ನಿಮ್ಮನ್ನು ರೋಗಿಯನ್ನಾಗಿ ಮಾಡಬಹುದು!

“ಹಸಿವಾಗ್ತಿದೆಯೇ ಗ್ರಾಹಕರೇ?”, “ನಿಮ್ಮ ರೈಡ್ ಹಾದಿಯಲ್ಲಿದೆ”, “ದಯವಿಟ್ಟು ನಮಗೆ ರೇಟಿಂಗ್ ನೀಡಿ” — ದಿನವಿಡೀ ನಮ್ಮ ಮೊಬೈಲ್ ಪರದೆಯ ಮೇಲೆ ಮೂಡಿಬರುವ ಇಂತಹ ನೂರಾರು ಆಪ್ ನೋಟಿಫಿಕೇಶನ್‌ಗಳು ನಮಗೆ ತೀರಾ ಸಾಮಾನ್ಯ ಎನಿಸಬಹುದು. ಆದರೆ, ಹಗಲಿರುಳು ಸ್ಮಾರ್ಟ್‌ಫೋನ್‌ಗಳಿಂದ ಬರುವ ಈ ನಿರಂತರ ‘ಅಲರ್ಟ್’ (Alert) ಸಂದೇಶಗಳು ಮನುಷ್ಯನನ್ನು ಗಂಭೀರ ಕಾಯಿಲೆಗಳಿಗೆ ತಳ್ಳುತ್ತಿವೆ ಎಂದು ಆರೋಗ್ಯ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ದೇಹದಲ್ಲಿ ಹಾರ್ಮೋನ್ ಏರುಪೇರು; ಹೆಚ್ಚುವ ಒತ್ತಡ:

ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಮೊಬೈಲ್‌ನಲ್ಲಿ ಪದೇ ಪದೇ ಬರುವ ನೋಟಿಫಿಕೇಶನ್‌ಗಳ ಶಬ್ದ ಅಥವಾ ವೈಬ್ರೇಷನ್ ಮನುಷ್ಯನ ಮೆದುಳಿನಲ್ಲಿ ತುರ್ತು ಪರಿಸ್ಥಿತಿಯ ‘ಬದುಕುಳಿಯುವ ಪ್ರತಿಕ್ರಿಯೆ’ಯನ್ನು (Survival Response) ಪ್ರಚೋದಿಸುತ್ತದೆ. ಇದರಿಂದಾಗಿ ದೇಹದ ರಕ್ತಪ್ರವಾಹದಲ್ಲಿ ಅಡ್ರಿನಾಲಿನ್ (Adrenaline) ಮತ್ತು ಕಾರ್ಟಿಸೋಲ್ (Cortisol) ನಂತಹ ಒತ್ತಡದ ಹಾರ್ಮೋನ್‌ಗಳು (Stress Hormones) ಅತಿಯಾಗಿ ಬಿಡುಗಡೆಯಾಗಲು ಆರಂಭಿಸುತ್ತವೆ. ಇದು ನೇರವಾಗಿ ಮನುಷ್ಯನ ರಕ್ತದೊತ್ತಡವನ್ನು (High Blood Pressure) ಹೆಚ್ಚಿಸುತ್ತದೆ.

ಯುವಕರಲ್ಲಿ ಹೃದಯಾಘಾತಕ್ಕೆ ಕಾರಣವಾಗ್ತಿದೆಯೇ ಸೋಷಿಯಲ್ ಮೀಡಿಯಾ?:

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು (Cardiovascular Diseases) ಮತ್ತು ದಿಢೀರ್ ಹೃದಯಾಘಾತಗಳು (Heart Attacks) ಹೆಚ್ಚಾಗುತ್ತಿರುವುದಕ್ಕೆ ಡಿಜಿಟಲ್ ಅಡಿಕ್ಷನ್ ಕೂಡ ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಸೋಷಿಯಲ್ ಮೀಡಿಯಾ ಹಾಗೂ ಫುಡ್ ಡೆಲಿವರಿ ಆಪ್‌ಗಳ ನೋಟಿಫಿಕೇಶನ್ ಬಂದಾಗಲೆಲ್ಲಾ ಮೊಬೈಲ್ ಮೇಲೆ ಕಣ್ಣು ಹಾಯಿಸುವ ಅಭ್ಯಾಸವು ಮೆದುಳಿಗೆ ನಿರಂತರ ಆತಂಕ ಮತ್ತು ನಿರಾಸೆಯನ್ನು (Anxiety & Stress) ನೀಡುತ್ತದೆ. ಇದು ದೀರ್ಘಕಾಲದ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಿ ಹೃದಯದ ಆರೋಗ್ಯವನ್ನು ಸಂಪೂರ್ಣವಾಗಿ ಕೆಡಿಸುತ್ತದೆ.

ಇದನ್ನೂ ಓದಿ: ತಂತ್ರಜ್ಞಾನ ದುರುಪಯೋಗ: ಕರಾವಳಿಯಲ್ಲಿ ಸೈಬರ್ ಅಪರಾಧ ಏರಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ! 

ತಜ್ಞರ ಸಲಹೆಗಳೇನು?:

  • ಅನಗತ್ಯ ಫುಡ್, ಶಾಪಿಂಗ್ ಹಾಗೂ ಗೇಮಿಂಗ್ ಆಪ್‌ಗಳ ನೋಟಿಫಿಕೇಶನ್‌ಗಳನ್ನು ಸಂಪೂರ್ಣವಾಗಿ ಮ್ಯೂಟ್ ಅಥವಾ ಆಫ್ ಮಾಡಿ.

  • ಕೆಲಸದ ಸಮಯದಲ್ಲಿ ಮತ್ತು ರಾತ್ರಿ ಮಲಗುವಾಗ ಮೊಬೈಲ್ ಅನ್ನು ‘ಡು ನಾಟ್ ಡಿಸ್ಟರ್ಬ್’ (DND) ಮೋಡ್‌ನಲ್ಲಿಡಿ.

  • ಪ್ರತಿಯೊಂದು ಮೆಸೇಜ್ ಬಂದಾಗಲೂ ತಕ್ಷಣವೇ ಫೋನ್ ನೋಡುವ ಹಪಹಪಿಕೆಯನ್ನು ಕಡಿಮೆ ಮಾಡಿಕೊಳ್ಳಿ. ಡಿಜಿಟಲ್ ಗ್ಯಾಜೆಟ್‌ಗಳಿಂದ ನಿಯಮಿತವಾಗಿ ಬ್ರೇಕ್ ತೆಗೆದುಕೊಳ್ಳಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು