ವಡೋದರಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡ 11 ರನ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು. ಅಲ್ಲದೆ, ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ದಾಖಲೆಗೆ ಗುಜರಾತ್ ಪಾತ್ರವಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿತು. ತಂಡದ ಪರ ಬೆತ್ ಮೂನಿ 5, ಸೋಫಿ ಡಿವೈನ್ 25, ಅನುಷ್ಕಾ ಬ್ರಿಜ್‌ಮೋಹನ್ ಶರ್ಮಾ 33, ಆಶ್ಲೀ ಗಾರ್ಡ್ನರ್ 46, ಜಾರ್ಜಿಯಾ ವೇರ್‌ಹ್ಯಾಮ್ 44, ಭಾರ್ತಿ ಫುಲ್ಮಾಲಿ 5 ರನ್ ಗಳಿಸಿದರು.

ಇದನ್ನೂ ಓದಿ: ಭಾರತಕ್ಕೆ ಕ್ರಿಕೆಟ್ ತಂಡವನ್ನು ನಿರಾಕರಿಸಿದ್ದ ಬಾಂಗ್ಲಾ, ಶೂಟಿಂಗ್ ತಂಡಕ್ಕೆ ಅನುಮತಿ
168 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್‌ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ, ಹರ್ಮನ್‌ಪ್ರೀತ್ ಕೌರ್ ಕೇವಲ 48 ಎಸೆತಗಳಲ್ಲಿ 82 ರನ್ ಬಾರಿಸಿದರು. ಇದರಲ್ಲಿ 8 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳು ಸೇರಿವೆ. ಇನ್ನುಳಿದಂತೆ, ಸಜೀವನ್ ಸಜನಾ 26, ಹೇಲಿ ಮ್ಯಾಥ್ಯೂಸ್ 6, ನ್ಯಾಟ್ ಸಿವರ್ ಬ್ರಂಟ್ 2, ಅಮೆಲಿಯಾ ಕೆರ್ 20, ಅಮನ್‌ಜೋತ್ ಕೌರ್ 13, ಪೂನಂ ಖೇಮ್ನಾರ್ 2, ರಹೀಲಾ ಫಿರ್ಧೌಸ್ 1 ರನ್ ಗಳಿಸಿದರು.

ಮುಂಬೈ ಪರ ಬೌಲರ್‌ಗಳಾದ ಅಮೆಲಿಯಾ ಕೆರ್ 2, ಶಬ್ನಿಮ್ ಇಸ್ಮಾಯಿಲ್ ಮತ್ತು ನ್ಯಾಟ್ ಸಿವರ್ ಬ್ರಂಟ್ ತಲಾ ಒಂದು ವಿಕೆಟ್ ಕಬಳಿಸಿದರು. ಗುಜರಾತ್ ಪರ ಬೌಲರ್‌ಗಳಾದ ಕಾಶ್ವೀ ಗೌತಮ್ 1, ಸೋಫಿ ಡಿವೈನ್ 2, ಜಾರ್ಜಿಯಾ ವೇರ್‌ಹ್ಯಾಮ್ 1, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

