ಮಂಗಳೂರು : ನಗರದ ಹಸಿರು ದಳ ಕಚೇರಿಯಲ್ಲಿ ತ್ಯಾಜ್ಯ ಶ್ರಮಿಕರಿಗಾಗಿ (Waste Pickers/Cleaners) “ಲಿಂಗ ತಾರತಮ್ಯ ತಡೆಯೋಣ” ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಪುತ್ತೂರಿನ ಅನಿಕೇತನ ಲಾ ಛೇಂಬರ್ಸ್ನ ವಕೀಲ ಕೃಷ್ಣಪ್ರಸಾದ್ ನಡ್ಸಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಶ್ರಮಿಕರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಉಚ್ಚಿಲ ಬೀರಿ ಭಾಗದ ಹಲವಾರು ತ್ಯಾಜ್ಯ ಶ್ರಮಿಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಜ್ವಲ್ ಅವರು ಸ್ವಾಗತಿಸಿದರು. ನಾಗರಾಜ್ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ‘ಹಸಿರು ದಳ’ ಸಂಸ್ಥೆಯ ಸಾಮಾಜಿಕ ಕಳಕಳಿ ಮತ್ತು ಧೈಯೋದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ, ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಶ್ರಮಿಕರ ಮೂಲಭೂತ ಹಕ್ಕುಗಳು, ಮಕ್ಕಳ ಸುರಕ್ಷತೆ ಮತ್ತು ತುರ್ತು ಸಂದರ್ಭದಲ್ಲಿ ಬಳಸಬೇಕಾದ ಪೊಲೀಸ್ ಹೆಲ್ಪ್ಲೈನ್ ಮಾಹಿತಿ, ತಂಬಾಕು ಹಾಗೂ ಮದ್ಯಪಾನ (ಶರಾಬು) ಸೇವನೆಯಿಂದ ಆರೋಗ್ಯ ಮತ್ತು ಕುಟುಂಬದ ಮೇಲಾಗುವ ದುಷ್ಪರಿಣಾಮಗಳು, ರೇಷನ್ ಕಾರ್ಡ್ ಸಮಸ್ಯೆಗಳು ಹಾಗೂ ಬಾಡಿಗೆ ಒಪ್ಪಂದ (Rent Agreement) ಸಂಬಂಧಿತ ಕಾನೂನು ತೊಡಕುಗಳಿಗೆ ಪರಿಹಾರದ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ
ಕಾರ್ಯಕ್ರಮದ ಕೊನೆಯಲ್ಲಿ ಲಕ್ಷ್ಮೀಕಾಂತ್ ಅವರು ಅತಿಥಿಗಳಿಗೆ ಬಟ್ಟೆ ಚೀಲ ಮತ್ತು ಧನ್ಯವಾದ ಪತ್ರವನ್ನು ನೀಡಿ ಗೌರವಿಸಿದರು. ತದನಂತರ ರಚಿತಪ್ರಿಯಾ ಎನ್ ವಂದಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

