ಕೊಡಗು: ಕಳೆದ ಹಲವು ದಿನಗಳಿಂದ ಜಿಲ್ಲೆಯ ವಿವಿಧಡೆ ಹಿಂದೂ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರುಗುತ್ತಿದ್ದು, ಯಾವುದೇ ಸಾಮರಸ್ಯಕ್ಕೆ ಧಕ್ಕೆ ಬರದಂತೆ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಾ ಬಂದಿತ್ತು.
ಆದರೆ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಕಾರಿನಲ್ಲಿ ಬಂದು ಎಲ್ಲಾ ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಕಿತ್ತೊಯ್ದಿರುವ ಘಟನೆ ದಕ್ಷಿಣ ಕೊಡಗಿನ ಬಿರುನಾಣಿಯಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಚ್ಚಿಬೀಳಿಸುವ ಘಟನೆ: 9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಕಾಮಪಿಶಾಚಿ ಶಿಕ್ಷಕನ ಬಂಧನ!
ಬರುವ ಸೋಮವಾರದಂದು ಬಿರುನಾಣಿ ಯಲ್ಲಿ ಹಿಂದೂ ಸಂಗಮ ಆಯೋಜಿಸಲಾಗಿತ್ತು, ಇದರ ಪೂರ್ವ ತಯಾರಿಯಾಗಿ ನೆನ್ನೆ ಶುಕ್ರವಾರದಂದು ಬಿರುನಾಣಿ ಟೌನ್ ನಿಂದ ಮರೆನಾಡು ಕೊಡವ ಸಮಾಜದವರೆಗೆ ಕೇಸರಿ ಬಂಟಿಂಗ್ಗಳನ್ನು ಕಟ್ಟಲಾಗಿತ್ತು. ಆದರೆ ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಎಲ್ಲಾ ಬಂಟಿಂಗ್ಸ್ ಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಇದೀಗ ಸಿಸಿಟಿವಿ ಪರೀಕ್ಷಿಸಿದಾಗ ಕಿಡಿಗೇಡಿಗಳು ತೆರುವುಳಿಸುವ ದೃಶ್ಯ ಸರೆಯಾಗಿದೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಯಾರು ಈ ಕೃತ್ಯವನ್ನು ನಡೆಸಿದ್ದಾರೋ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

