ಭಾರತಕ್ಕೆ ಹೋಂಡಾ ADV 160, ವಾಹನ ಪ್ರಿಯರಲ್ಲಿ ಕುತೂಹಲ ಮೂಡಿಸಿದ ಹೊಸ ಅಡ್ವೆಂಚರ್ ಸ್ಕೂಟರ್

Honda ADV 160 Patent

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (HMSI) ಭಾರತದಲ್ಲಿ ಹೊಸ Honda ADV 160 ಸ್ಕೂಟರ್ ವಿನ್ಯಾಸಕ್ಕೆ ಪೇಟೆಂಟ್ ದಾಖಲಿಸಿರುವುದು ವಾಹನ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪ್ರೀಮಿಯಂ ಅಡ್ವೆಂಚರ್ ಶೈಲಿಯ ಈ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾದರೆ, ಯಮಹಾ ಏರೋಕ್ಸ್ 155 ಹಾಗೂ ಹೀರೋ ಕ್ಸೂಮ್  160 ಮಾದರಿಗಳಿಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

ಆದರೆ, ಭಾರತದಲ್ಲಿ Honda ADV 160 ಬಿಡುಗಡೆ ಕುರಿತು ಕಂಪನಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಪೇಟೆಂಟ್ ದಾಖಲೆ ಕೇವಲ ಬೌದ್ಧಿಕ ಸ್ವತ್ತಿನ (IP) ರಕ್ಷಣೆಗೆ ಮಾತ್ರವಾಗಿರಬಹುದು ಎಂಬ ಸಾಧ್ಯತೆಯೂ ಇದೆ.

ಸ್ಟೈಲಿಷ್ ಅಡ್ವೆಂಚರ್ ಲುಕ್

ಹೋಂಡಾ ಎಡಿವಿ 160 ಸಾಮಾನ್ಯ ಸ್ಕೂಟರ್‌ಗಳಿಗಿಂತ ಸಂಪೂರ್ಣ ಭಿನ್ನವಾದ, ಬೋಲ್ಡ್ ಅಡ್ವೆಂಚರ್ ಪ್ರೇರಿತ ವಿನ್ಯಾಸ ಹೊಂದಿದೆ. ಮುಂಭಾಗದಲ್ಲಿ ತೀಕ್ಷ್ಣ ವಿನ್ಯಾಸದ ಫ್ರಂಟ್ ಏಪ್ರನ್, ಟ್ವಿನ್‌ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸ್ಪೋರ್ಟಿ ಹಾಗೂ ಅಗ್ರೆಸಿವ್ ಲುಕ್ ನೀಡಲಾಗಿದೆ.

ಇದರ ಜೊತೆಗೆ ಎತ್ತರ ಹೊಂದಿಸಬಹುದಾದ ವಿಂಡ್‌ಸ್ಕ್ರೀನ್, ಬಲಿಷ್ಠ ಬಾಡಿ ಪ್ಯಾನೆಲ್‌ಗಳು ಹಾಗೂ ಫ್ಲಾಟ್ ಫುಟ್‌ಬೋರ್ಡ್ ಬದಲಿಗೆ ಸೆಂಟ್ರಲ್ ಸ್ಪೈನ್ ವಿನ್ಯಾಸ ಗಮನ ಸೆಳೆಯುತ್ತದೆ. ಸಾಂಪ್ರದಾಯಕ ಫ್ಯಾಮಿಲಿ ಸ್ಕೂಟರ್‌ಗಿಂತ ವಿಭಿನ್ನ ಹಾಗೂ ಪ್ರೀಮಿಯಂ ಅನುಭವ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಹೋಂಡಾ ಎಡಿವಿ 160 ಅನ್ನು ಮ್ಯಾಟ್ ಗ್ರೀನ್, ರೆಡ್, ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್ ಸೇರಿದಂತೆ ಬಹು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಒಟ್ಟಾರೆ ವಿನ್ಯಾಸ ಮ್ಯಾಕ್ಸಿ-ಸ್ಕೂಟರ್ ಲುಕ್ ಜೊತೆಗೆ ಅಡ್ವೆಂಚರ್ ಬೈಕ್ ಸ್ಪರ್ಶವನ್ನೂ ನೀಡುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಟ್ರಕ್ಕಿಂಗ್‌ ಹೋಗ ಬಯಸುವವರಿಗೆ ಗುಡ್‌ನ್ಯೂಸ್‌, ಜೂನ್‌ 1 ರಿಂದ ವಿವಿಧ ಫಾಲ್ಸ್‌ಗಳು ರೀ ಓಪನ್

ಫೀಚರ್‌ಗಳಲ್ಲಿ ಏನು ವಿಶೇಷ?

ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
ಎಲ್‌ಇಡಿ ಲೈಟಿಂಗ್ ಸಿಸ್ಟಮ್
ಕೀಲೆಸ್ ಇಗ್ನಿಷನ್
ಯುಎಸ್‌ಬಿ ಚಾರ್ಜಿಂಗ್ ಪೋರ್ಟ್
ಹೋಂಡ ಸ್ಮಾರ್ಟ್‌ ಕೀ ತಂತ್ರಜ್ಞಾನ
ಟ್ರಾಕ್ಷನ್ ಕಂಟ್ರೋಲ್
ಆಟೋಮ್ಯಾಟಿಕ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್

ಇದಲ್ಲದೆ, ಸುಮಾರು 27-30 ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ಹಾಗೂ 8.1 ಲೀಟರ್ ಇಂಧನ ಟ್ಯಾಂಕ್ ನೀಡಲಾಗಿದೆ. ಸ್ಕೂಟರ್‌ನಲ್ಲಿ 14 ಇಂಚಿನ ಮುಂಭಾಗ ಮತ್ತು 13 ಇಂಚಿನ ಹಿಂಭಾಗದ ಅಲಾಯ್ ವೀಲ್‌ಗಳು, ಡಿಸ್ಕ್ ಬ್ರೇಕ್ ಹಾಗೂ ಸಿಂಗಲ್-ಚಾನೆಲ್ ABS ವ್ಯವಸ್ಥೆ ಇದೆ.

ಎಂಜಿನ್ ಮತ್ತು ಭಾರತ ಪ್ರವೇಶ ಸಾಧ್ಯತೆ

ಹೋಂಡಾ ಎಡಿವಿ 160 ನಲ್ಲಿ 156.9cc ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, ಇದು ಸುಮಾರು 15.8 bhp ಪವರ್ ಮತ್ತು 14.7 Nm ಟಾರ್ಕ್ ಉತ್ಪಾದಿಸುತ್ತದೆ. ನಗರ ಪ್ರಯಾಣ ಹಾಗೂ ಹೈವೇ ಟೂರಿಂಗ್ ಎರಡಕ್ಕೂ ಸೂಕ್ತವಾದ ಕಾರ್ಯಕ್ಷಮತೆ ನೀಡುವ ನಿರೀಕ್ಷೆಯಿದೆ.

ಭಾರತದಲ್ಲಿ ಬಿಡುಗಡೆಯಾದರೆ ಹೋಂಡಾ ಎಡಿವಿ 160, ಹೋಂಡಾದ ಅತ್ಯಂತ ಪ್ರೀಮಿಯಂ ಸ್ಕೂಟರ್‌ಗಳಲ್ಲಿ ಒಂದಾಗುವ ಸಾಧ್ಯತೆ ಇದ್ದು, ಪ್ರಸ್ತುತ Yamaha Aerox 155 ಪ್ರಾಬಲ್ಯ ಹೊಂದಿರುವ ಪರ್ಫಾರ್ಮೆನ್ಸ್ ಸ್ಕೂಟರ್ ವಿಭಾಗಕ್ಕೆ ಹೋಂಡಾ ಬಲವಾದ ಎಂಟ್ರಿ ನೀಡುವ ಸಾಧ್ಯತೆ ಇದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು