ಮಳೆಗಾಲದಲ್ಲಿ ಟ್ರಕ್ಕಿಂಗ್‌ ಹೋಗ ಬಯಸುವವರಿಗೆ ಗುಡ್‌ನ್ಯೂಸ್‌, ಜೂನ್‌ 1 ರಿಂದ ವಿವಿಧ ಫಾಲ್ಸ್‌ಗಳು ರೀ ಓಪನ್

beltangady-trekking-spots-waterfalls-reopen

ಬೆಳ್ತಂಗಡಿ: ತಾಲೂಕಿನ ಟ್ರೆಕ್ಕಿಂಗ್ ತಾಣಗಳು ಹಾಗೂ ಪ್ರಮುಖ ಜಲಪಾತಗಳು ಜೂನ್ 1ರಿಂದ ಮತ್ತೆ ಪ್ರವಾಸಿಗರಿಗೆ ತೆರೆಯಲಿವೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಈ ಹಿಂದೆ ನೆತ್ರಾವತಿ ಶಿಖರ, ಬಂಡಾಜೆ ಫಾಲ್ಸ್ ಹಾಗೂ ಗಡಾಯಿಕಲ್ಲು ಸೇರಿದಂತೆ ಜನಪ್ರಿಯ ತಾಣಗಳಿಗೆ ಜನವರಿಯಿಂದ ಪ್ರವೇಶ ನಿರ್ಬಂಧ ಹೇರಿತ್ತು.

ಬೇಸಿಗೆ ಅವಧಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಅಗ್ನಿ ಅವಘಡ ತಡೆಯುವುದು ಹಾಗೂ ಹುಲಿ ಗಣತಿ ಕಾರ್ಯ ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಬಂಧ ಜಾರಿಗೊಳಿಸಲಾಗಿತ್ತು. ತಾಲೂಕಿನ ಮಲವಂತಿಗೆ ಗ್ರಾಮ ಸೇರಿದಂತೆ ಕುಡ್ರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪ್ರದೇಶಗಳಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಟ್ರೆಕ್ಕರ್‌ಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಅಪಾಯ ಹೆಚ್ಚಿರುವುದರಿಂದ ಹಾಗೂ ಕೆಲವು ಪ್ರವಾಸಿಗರು ಸುರಕ್ಷತಾ ಸೂಚನೆಗಳನ್ನು ನಿರ್ಲಕ್ಷಿಸುವ ಹಿನ್ನೆಲೆ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶ ನಿಷೇಧಿಸಿತ್ತು.

ಇತ್ತೀಚಿನ ಮುಂಗಾರು ಪೂರ್ವ ಮಳೆಯ ಪರಿಣಾಮ ಅರಣ್ಯ ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಳೆ-ನದಿಗಳಲ್ಲಿ ನೀರಿನ ಹರಿವು ಸಹಜ ಸ್ಥಿತಿಗೆ ಮರಳಿದೆ. ಇದರಿಂದ ಕಾಡ್ಗಿಚ್ಚಿನ ಅಪಾಯ ತಗ್ಗಿರುವ ಹಿನ್ನೆಲೆ ಇಲಾಖೆ ನಿರ್ಬಂಧ ತೆರವುಗೊಳಿಸಲು ತೀರ್ಮಾನಿಸಿದೆ.

ಇದನ್ನೂ ಓದಿ: ದುಬಾರೆಯಲ್ಲಿ ಆನೆಗಳ ಕಾದಾಟದ ದುರಂತ: ಪ್ರವಾಸಿ ಮಹಿಳೆ ಬಲಿಯಾದ ಬೆನ್ನಲ್ಲೇ ತೀವ್ರ ಗಾಯಗೊಂಡಿದ್ದ ಆನೆ ‘ಮಾರ್ತಾಂಡ’ ಸಾವು! ಕಣ್ಣೀರಿಟ್ಟ ಮಾವುತರು

ಈಗಾಗಲೇ ಕಡಮಗುಂಡಿ ಹಾಗೂ ಬೊಳ್ಳೆ ಜಲಪಾತಗಳಿಗೆ ಸಾರ್ವಜನಿಕ ಪ್ರವೇಶ ಮುಕ್ತವಾಗಿದ್ದು, ಖಾಸಗಿ ಜಾಗದಲ್ಲಿರುವ ಕಾರಣ ಏರ್ಮಾಯಿ ಜಲಪಾತಕ್ಕೆ ಯಾವುದೇ ಪ್ರವೇಶ ನಿರ್ಬಂಧ ಇರಲಿಲ್ಲ.

ನಾಡ-ಲೈಲ ಗ್ರಾಮದ ಸಮೀಪ ಸಮುದ್ರಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿರುವ ಪ್ರಸಿದ್ಧ ಟ್ರೆಕ್ಕಿಂಗ್ ತಾಣ ಗಡಾಯಿಕಲ್ಲಿಗೂ ಜೂನ್ 1ರಿಂದ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಅಗ್ನಿ ಅವಘಡದ ಎಚ್ಚರಿಕೆ ಹಾಗೂ ಹುಲಿ ಗಣತಿ ಹಿನ್ನೆಲೆ ಫೆಬ್ರವರಿಯಲ್ಲಿ ಇಲ್ಲಿ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಭಾರಿ ಮಳೆಯ ಸಂದರ್ಭ ಕಲ್ಲಿನ ಪ್ರದೇಶ ಜಾರಿ ಅಪಾಯ ಹೆಚ್ಚಾದರೆ ಮುಂಗಾರು ತೀವ್ರ ಅವಧಿಯಲ್ಲಿ ಮತ್ತೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರಿಗೆ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಸೂಚನೆಗಳು

ಪ್ರವಾಸಿಗರು ಮತ್ತು ಟ್ರೆಕ್ಕರ್‌ಗಳು ಪರಿಸರ ಸ್ವಚ್ಛತೆ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು.
ಅಕ್ರಮ ಅಥವಾ ಅಹಿತಕರ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
ನಿಗದಿತ ಸಮಯದಲ್ಲಿ ಮಾತ್ರ (ಬೆಳಗ್ಗೆದಿಂದ ಸಂಜೆವರೆಗೆ) ಪ್ರವೇಶಕ್ಕೆ ಅವಕಾಶ; ರಾತ್ರಿ ತಂಗುವುದಕ್ಕೆ ಕಟ್ಟುನಿಟ್ಟಿನ ನಿಷೇಧ.
ಅರಣ್ಯ ಇಲಾಖೆ ನಿಗದಿಪಡಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಇಲಾಖೆ ಗುರುತಿಸಿದ ಪ್ರದೇಶಗಳ ಹೊರಗೆ ಸಂಚರಿಸುವಂತಿಲ್ಲ.
ಪ್ರತಿಯೊಬ್ಬ ಪ್ರವಾಸಿಗರೂ ಕಡ್ಡಾಯವಾಗಿ ಮೂಲ ಗುರುತಿನ ಚೀಟಿ (Original ID Card) ಹೊಂದಿರಬೇಕು; ಇಲ್ಲದಿದ್ದರೆ ಪ್ರವೇಶ ನಿರಾಕರಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು