ಅಮಾನವೀಯ ಕೃತ್ಯ: ಪತಿಯ ಕಾಮದಾಹಕ್ಕೆ ಪತ್ನಿಯೇ ಸಾಥ್! ಬ್ಯೂಟಿ ಪಾರ್ಲರ್ ತರಬೇತಿ ಹೆಸರಲ್ಲಿ ಯುವತಿ ಮೇಲೆ ಅತ್ಯಾಚಾರ

ಗುನಾ (ಮಧ್ಯಪ್ರದೇಶ): ಬ್ಯೂಟಿ ಪಾರ್ಲರ್ ತರಬೇತಿಯ ನೆಪದಲ್ಲಿ ಯುವತಿಯೊಬ್ಬಳನ್ನು ಮನೆಗೆ ಕರೆಸಿಕೊಂಡು, ಆಕೆಯ ಮೇಲೆ ಪತಿ ಅತ್ಯಾಚಾರ ಎಸಗಲು ಪತ್ನಿಯೇ ಸಹಾಯ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಲಾಬಗಂಜ್ ನಿವಾಸಿಯಾಗಿರುವ ಯಾಸ್ಮಿನ್ ಖಾನ್ ಎಂಬಾಕೆ ಬ್ಯೂಟಿ ಪಾರ್ಲರ್ ತರಬೇತಿ ನೀಡುತ್ತಿದ್ದಳು. ಈಕೆಯ ಪತಿ ಶರೀಫ್ ಖಾನ್ ಕೂಡ ಅಲ್ಲಿಯೇ ಇರುತ್ತಿದ್ದನು. ಸುಮಾರು 4 ತಿಂಗಳ ಹಿಂದೆ ತರಬೇತಿಗಾಗಿ ಸಂತ್ರಸ್ತ ಯುವತಿಯನ್ನು ಯಾಸ್ಮಿನ್ ತನ್ನ ಮನೆಗೆ ಕರೆಸಿಕೊಂಡಿದ್ದಳು. ಯಾಸ್ಮಿನ್‌ಗಾಗಿ ಯುವತಿ ಕಾಯುತ್ತಿದ್ದ ಸಂದರ್ಭದಲ್ಲಿ ಶರೀಫ್ ಖಾನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರದ ನಂತರ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಶರೀಫ್ ಬೆದರಿಕೆ ಹಾಕಿದ್ದನು. ಇದರಿಂದಾಗಿ ಸಂತ್ರಸ್ತೆಯು ನಾಲ್ಕು ತಿಂಗಳ ಕಾಲ ಮೌನವಾಗಿದ್ದಳು. ನಂತರ ಈ ವಿಷಯವನ್ನು ಯಾಸ್ಮಿನ್ (ಪತ್ನಿ) ಬಳಿ ಹೇಳಿಕೊಂಡರೂ, ಆಕೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬದಲಿಗೆ, ಶರೀಫ್ ಕೋಣೆಯೊಳಗೆ ಕೃತ್ಯವೆಸಗುತ್ತಿದ್ದಾಗ ಯಾಸ್ಮಿನ್ ಗೇಟ್ ಬಳಿ ನಿಂತು ಪಹರೆ ಕಾಯುತ್ತಿದ್ದಳು ಎಂದು ಎಸ್‌ಪಿ (SP) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾಸವಾಳದ ಹೂವು ನುಂಗಿ ಆರೂವರೆ ತಿಂಗಳ ಮಗು ಸಾವು: ಮೈಸೂರಿನಲ್ಲಿ ನಡೆದ ದಾರುಣ ಘಟನೆ!

ಇತ್ತೀಚೆಗೆ ಶನಿವಾರದಂದು ಮತ್ತೆ ಫೋನ್ ಮಾಡಿದ ಶರೀಫ್ ಖಾನ್, ಮನೆಗೆ ಬರುವಂತೆ ಯುವತಿಗೆ ಕರೆದಿದ್ದಾನೆ. ಬರದಿದ್ದರೆ ಹಳೆಯ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ. ಯುವತಿ ಮನೆಗೆ ಹೋದಾಗ ಅಲ್ಲಿ ಯಾಸ್ಮಿನ್, ಶರೀಫ್ ಮತ್ತು ಆತನ ತಮ್ಮ ಮುಬೀನ್ ಖಾನ್ ಕೂಡ ಇದ್ದರು. ಈ ವೇಳೆ ಎಲ್ಲರ ಸಮ್ಮುಖದಲ್ಲೇ ಯುವತಿಯನ್ನು ಕೋಣೆಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಲು ಶರೀಫ್ ಮುಂದಾಗಿದ್ದಾನೆ ಎಂದು ವರದಿಯಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು