ಐಪಿಎಲ್ ಮೈದಾನದಲ್ಲಿ ಪ್ರೇಮದ ಸಿಕ್ಸರ್: ಮುಂಬೈ ಇಂಡಿಯನ್ಸ್ ಅಭಿಮಾನಿಯ ಮನಗೆದ್ದ ಕೆಕೆಆರ್ ಸುಂದರಿ!

ಮುಂಬೈ: ಕ್ರಿಕೆಟ್ ಮೈದಾನ ಅಂದರೆ ಕೇವಲ ರನ್ ಮತ್ತು ವಿಕೆಟ್‌ಗಳ ಅಬ್ಬರವಷ್ಟೇ ಅಲ್ಲ, ಅದು ಹಲವು ಸುಂದರ ಕ್ಷಣಗಳಿಗೂ ಸಾಕ್ಷಿಯಾಗುತ್ತದೆ. ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ನಡೆದ ಪ್ರೇಮ ನಿವೇದನೆಯ (Proposal) ದೃಶ್ಯವೊಂದು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

ಪಂದ್ಯ ನಡೆಯುತ್ತಿದ್ದಾಗ ಮುಂಬೈ ಇಂಡಿಯನ್ಸ್ (MI) ತಂಡದ ಜೆರ್ಸಿ ಧರಿಸಿದ್ದ ಯುವಕನೊಬ್ಬ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಅಭಿಮಾನಿಯಾಗಿದ್ದ ತನ್ನ ಗೆಳತಿಗೆ ಮೈದಾನದಲ್ಲೇ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾನೆ. ಅನಿರೀಕ್ಷಿತ ಈ ನಡೆಯಿಂದ ಯುವತಿ ಮೊದಲು ಶಾಕ್ ಆದರೂ, ನಂತರ ಭಾವುಕರಾಗಿ ಪ್ರೀತಿಯನ್ನು ಒಪ್ಪಿಕೊಂಡರು.

ಇದನ್ನೂ ಓದಿ: ಆರ್‌ಸಿಬಿ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಎಂಎಸ್ ಧೋನಿ ಅಲಭ್ಯ! ಸಿಎಸ್‌ಕೆ ಅಭಿಮಾನಿಗಳಿಗೆ ಬಿಗ್ ಶಾಕ್!

ಇಲ್ಲಿದೆ ನೋಡಿ ವಿಡಿಯೋ :


ಯುವಕ ಮೊಣಕಾಲೂರಿ ಉಂಗುರ ನೀಡುತ್ತಿದ್ದಂತೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಇವರಿಬ್ಬರ ತಂಡಗಳು ಮೈದಾನದಲ್ಲಿ ಎದುರಾಳಿಗಳಾಗಿದ್ದರೂ, ಗ್ಯಾಲರಿಯಲ್ಲಿ ಮಾತ್ರ ಪ್ರೀತಿ ಗೆದ್ದಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಈಗ “ಕ್ರಿಕೆಟ್ ಪ್ರೇಮ”ಕ್ಕೆ ಹೊಸ ಅರ್ಥ ನೀಡಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು