Breaking News

T20: ಇಶನ್ ಕಿಶನ್ ಶತಕ, ಸೂರ್ಯಕುಮಾರ್ ಅರ್ಧ ಶತಕ, ಅರ್ಶದೀಪ್ 5 ವಿಕೆಟ್, ಭಾರತಕ್ಕೆ ಸರಣಿ

IND vs NZ T20 Ishan Kishan century, Suryakumar half century, Arshadeep 5 wickets, and India won the series

ಟಿ20 ವಿಶ್ವಕಪ್‌ಗೆ (T20 World Cup 2026) ಮೊದಲು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಟಿ20 ಸರಣಿಯನ್ನು ಆಡಿದ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿತು. ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತಕ್ಕೆ ನಾಲ್ಕನೇ ಪಂದ್ಯದಲ್ಲಿ ಸೋಲಾಯಿತು. ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಪ್ರಾಬಲ್ಯ ಮೆರೆದು ಗೆಲುವು ತನ್ನದಾಗಿಸಿಕೊಂಡಿತು.

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 271 ರನ್ ಕಲೆಹಾಕಿತು. ಇಶಾನ್‌ ಕಿಶನ್‌ ಅವರ ಸ್ಫೋಟಕ ಶತಕ, ಸೂರ್ಯಕುಮಾರ್‌ ಯಾದವ್‌ ಅವರ ಆಕರ್ಷಕ ಅರ್ಧ ಶತಕದಿಂದಾಗಿ ಭಾರತ ತಂಡವು ಎದುರಾಳಿ ನ್ಯೂಜಿಲ್ಯಾಂಡ್‌ ಗೆಲುವಿಗೆ ಬೃಹತ್‌ ಮೊತ್ತದ ಟಾರ್ಗೆಟ್‌ ನೀಡಿತು.

Advertisement

ಕಿಶನ್‌ ಅವರು 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಸಿಡಿಸಿ ಒಟ್ಟು 103 ರನ್‌ಗಳನ್ನು ಬಾರಿಸಿದರು. ಸೂರ್ಯಕಮಾರ್‌ ಯಾದವ್‌ ಅವರು 30 ಎಸೆತಗಳಳ್ಲಿ 63 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಒಳಗೊಂಡಿವೆ. ಇನ್ನುಳಿದಂತೆ ಹಾರ್ದಿಕ್‌ ಪಾಂಡ್ಯ 42, ಅಭಿಷೇಕ್‌ ಶರ್ಮಾ 30 ರನ್‌ ಬಾರಿಸಿದರೆ, ಸಂಜು ಸ್ಯಾಮ್ಸನ್‌ 6, ರಿಂಕು ಸಿಂಗ್‌ 8, ಶಿವಂ ದುಬೆ 7 ರನ್‌ ಗಳಿಸಿದದರು.

ಇದನ್ನೂ ಓದಿ: WPL: ಮುಂಬೈ ಮಣಿಸಿ ಪ್ಲೇಆಫ್​ಗೇರಿದ ಗುಜರಾತ್

ಕಿವೀಸ್‌ ಪರ ಲಾಕಿ ಫರ್ಗುಸನ್‌ 2 ವಿಕೆಟ್‌ ಪಡೆದರೆ, ಜಾಕೋಬ್‌ ಡಫಿ, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಕೈಲ್ ಜೇಮಿಸನ್‌ ತಲಾ 1 ವಿಕೆಟ್‌ ಪಡೆದರು.
272 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಕಿವೀಸ್‌, 19.4 ಓವರ್‌ಗಳಲ್ಲಿ 225 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲುಂಡಿತು. ತಂಡದ ಪರ ಫಿನ್‌ ಅಲೆನ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದರೂ ಇತರೆ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.‌

ಫಿನ್‌ ಅಲೆನ್‌ ಅವರು 8 ಬೌಂಡರಿ ಹಾಗೂ 6 ಸಿಕ್ಸರ್‌ಗಳನ್ನು ಸಿಡಿಸಿ ಒಟ್ಟು 38 ಎಸೆತಗಳಲ್ಲಿ 80 ರನ್‌ ಬಾರಿಸಿದರು. ರಾಚಿನ್‌ ರವೀಂದ್ರ 30, ಡ್ಯಾರಿಲ್‌ ಮಿಚೆಲ್‌ 26, ಟಿಮ್‌ ಸೀಫರ್ಟ್‌ 5, ಗ್ಲೆನ್‌ ಫಿಲಿಪ್ಸ್‌ 7, ಬೆವೊನ್‌ ಜಾಕೋಬ್ಸ್‌ 7, ಕೈಲ್‌ ಜೇಮಿಸನ್‌ 9, ಇಶ್‌ ಸೋಧಿ 33, ಲಾಕಿ ಫರ್ಗುಸನ್‌ 3, ಜಾಕೋಬ್‌ ಡಫ್ಪಿ 9 ರನ್‌ ಗಳಿಸಿದರೆ, ಮಿಚೆಲ್‌ ಸ್ಯಾಂಟ್ನರ್‌ ಶೂನ್ಯ ಸುತ್ತಿದರು.

ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ 5 ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್ 3, ಅಕ್ಷರ್‌ ಪಟೇಲ್‌, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು