ಜಾಗತಿಕ ಇಂಧನ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಭಾರತ ಆರ್ಥಿಕತೆಗೆ ಹೊಡೆತ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ವರ್ಕ್ ಫ್ರಂ ಹೋಮ್ (WFH), ವಿದೇಶಿ ಮದುವೆಗಳು ಹಾಗೂ ಅನಾವಶ್ಯಕ ವಿದೇಶ ಪ್ರವಾಸಗಳನ್ನು ತಪ್ಪಿಸುವಂತೆ ಅವರು ಕರೆ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ದೇಶಭಕ್ತಿ ಎಂದರೆ ಗಡಿಯಲ್ಲಿ ಪ್ರಾಣ ತ್ಯಾಗ ಮಾತ್ರವಲ್ಲ, ದೇಶದ ಹಿತಕ್ಕಾಗಿ ದೈನಂದಿನ ಜೀವನದಲ್ಲೂ ಜವಾಬ್ದಾರಿಯುತ ನಡೆ ಅಗತ್ಯ” ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರು ಕಾರ್ಯಕ್ರಮಕ್ಕೂ ಮುನ್ನ ಸ್ಫೋಟಕ ವಸ್ತು ಪತ್ತೆ; ಪೊಲೀಸ್ ವಶದಲ್ಲಿ ಶಂಕಿತ
ಇಂಧನ ಬಳಕೆಯನ್ನು ಕಡಿಮೆ ಮಾಡಲು ಮೆಟ್ರೋ, ಸಾರ್ವಜನಿಕ ಸಾರಿಗೆ ಹಾಗೂ ಕಾರ್‌ಪೂಲಿಂಗ್ ಬಳಸುವಂತೆ ಪ್ರಧಾನಿ ಸಲಹೆ ನೀಡಿದರು. ಜೊತೆಗೆ ಕೋವಿಡ್ ಅವಧಿಯಲ್ಲಿದ್ದಂತೆ ವರ್ಕ್ ಫ್ರಂ ಹೋಮ್, ಆನ್‌ಲೈನ್ ಸಭೆಗಳು ಮತ್ತು ವರ್ಚುವಲ್ ಕಾನ್ಫರೆನ್ಸ್‌ಗಳನ್ನು ಮರುಪ್ರಾರಂಭಿಸುವ ಅಗತ್ಯವಿದೆ ಎಂದರು.
ವಿದೇಶಿ ಮದುವೆಗಳು, ವಿದೇಶ ಪ್ರವಾಸಗಳು ಮತ್ತು ಅನಾವಶ್ಯಕ ಚಿನ್ನ ಖರೀದಿಗಳನ್ನು ಕನಿಷ್ಠ ಒಂದು ವರ್ಷ ಮುಂದೂಡಲು ಜನರಿಗೆ ಅವರು ಮನವಿ ಮಾಡಿದರು. “ಚಿನ್ನ ಖರೀದಿಗೆ ಹೆಚ್ಚಿನ ವಿದೇಶಿ ವಿನಿಮಯ ವೆಚ್ಚವಾಗುತ್ತದೆ” ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದ ಪ್ರಧಾನಿ ಮೋದಿ, ವಿದ್ಯುತ್ ವಾಹನಗಳ ಬಳಕೆಯನ್ನೂ ಉತ್ತೇಜಿಸಿದರು.


