Breaking News

Trending: ಆಪರೇಷನ್‌ ಸಿಂದೂರ ಕಾರ್ಯಾಚರಣೆ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

Operation Sindoor Video

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಮೇ ತಿಂಗಳಿನಲ್ಲಿ ಭಾರತೀಯ ಸೇನೆ ಆಪರೇಷನ್‌ ಸಿಂದೂರ ಹೆಸರಿನಡಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿದ್ದು ಗೊತ್ತೇ ಇದೆ. ಭಾರತದ ಮೂರೂ ಸೇನೆಗಳು (ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆ) ಏಕಕಾಲದಲ್ಲಿ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ಅಕ್ಷರಶಃ ಪಾಕಿಸ್ತಾನ ತತ್ತರಿಸಿತ್ತು. ಅಮೆರಿಕ ಸೇರಿದಂತೆ ವಿವಿಧ ದೇಶಗಳ ನೆರವು ಬೇಡಿಕೊಂಡಿತ್ತು.

ಭಾರತದ ವೀರ ಯೋಧರ ಈ ಕೆಚ್ಚೆದೆಯ ಸಾಹಸದ ಕಾರ್ಯಾಚರಣೆಯನ್ನು ತೋರಿಸುವ ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಹೌದು, ಆಪರೇಷನ್‌ ಸಿಂದೂರ ಹೆಸರಿನಡಿ ಸಾಹಸ, ಧೈರ್ಯ, ಶೌರ್ಯ ಹಾಗೂ ಅಚಲ ದೃಢಸಂಕಲ್ಪದಿಂದ ಹೋರಾಡಿದ ಸೈನಿಕರ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆಯು ಸೇನಾ ದಿನಾಚರಣೆಯಾದ ಜ.15 ರಂದು ಹಂಚಿಕೊಂಡಿದೆ.

Advertisement

ಇದನ್ನೂ ಓದಿ: ಭಾರತದ ಗಡಿ ಪ್ರವೇಶಿಸಿದ ಪಾಕ್ ಮೀನುಗಾರಿಕಾ ದೋಣಿ ಸೆರೆ : ವಿಡಿಯೋ ಇಲ್ಲಿದೆ

ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡು, “ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಅದಮ್ಯ ಧೈರ್ಯ, ಶೌರ್ಯ ಮತ್ತು ಅಚಲವಾದ ದೃಢಸಂಕಲ್ಪದಿಂದ ಇತಿಹಾಸವನ್ನು ಸೃಷ್ಟಿಸಿದವು. ಜೈಪುರದಲ್ಲಿ ನಡೆದ ಸೇನಾ ದಿನದ ಮೆರವಣಿಗೆಯಲ್ಲಿ ಪ್ರದರ್ಶಿಸಲಾದ ಈ ಕಿರುಚಿತ್ರದ ಮೂಲಕ ಈ ಸ್ಪೂರ್ತಿದಾಯಕ ಶೌರ್ಯಗಾಥೆಯನ್ನು ವೀಕ್ಷಿಸಿ” ಎಂದು ಬರೆದುಕೊಳ್ಳಲಾಗಿದೆ.

ಆಪರೇಷನ್‌ ಸಿಂದೂರದ ಹಿನ್ನೆಲೆ

೨೦೨೫ರ ಏ.೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೫ ಹಿಂದೂಗಳನ್ನು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಗುಂಡಿಕ್ಕಿ ಕೊಂದಿದ್ದರು. ಅಲ್ಲದೆ, ಧರ್ಮದ ಆಧಾರ ಮೇಲೆ ಈ ಹತ್ಯೆ ನಡೆದಿತ್ತು. ಹಿಂದೂಗಳನ್ನು ಹುಡುಕಿ ಕೊಲ್ಲಲಾಯಿತು. ಸುಮಂಗಲಿಯರನ್ನು ವಿಧವೆಯನ್ನಾಗಿಸಿದರು. ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿತು. ದಾಳಿಯ ನಂತರ, ಭಾರತವು ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಶಪಥ ಮಾಡಿತ್ತು.

ಅದರಂತೆ, ೨೦೨೫ರ ಮೇ ರಾತ್ರಿ ಭಾರತೀಯ ಸೇನೆಯು ಆಪರೇಷನ್ ಸಿಂದೂರದಡಿ ಕಾರ್ಯಾಚರಣೆ ಕೈಗೊಂಡಿತ್ತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಟ್ಟು ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿತ್ತು. ದಾಳಿಗಳು ಭಯೋತ್ಪಾದಕ ನೆಲೆಗಳಿಗೆ ಭಾರಿ ಹಾನಿಯನ್ನುಂಟುಮಾಡಿದವು. ಪಾಕಿಸ್ತಾನ ಸೇನೆಯಲ್ಲಿ ಉಂಟಾದ ಭೀತಿಯ ಬಗ್ಗೆಯೂ ವರದಿಗಳಾಗಿದ್ದವು. ಕೆಲವು ಪಾಕಿಸ್ತಾನದ ಅಧಿಕಾರಿಗಳು, ನಾಯಕರು ಸುರಕ್ಷಿತ ಸ್ಥಳಕ್ಕೆ ಪಲಾಯಾನ ಮಾಡಿದ್ದರು.

 ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು