ಕಾರ್ಯಾಚರಣೆ : ಅಂತರರಾಷ್ಟ್ರೀಯ ಸಾಗರ ಗಡಿ ರೇಖೆ (IMBL) ಸಮೀಪ ಭಾರತೀಯ ಸಾಗರ ಪ್ರದೇಶದೊಳಗೆ ಒಂದು ಪಾಕಿಸ್ತಾನಿ ಮೀನುಗಾರಿಕಾ ದೋಣಿಯು ಜ.14 ರಂದು ಪತ್ತೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಭಾರತ ಕರಾವಳಿ ರಕ್ಷಣಾ ಪಡೆಯು ಈ ದೋಣಿಯನ್ನು ಪತ್ತೆಹಚ್ಚಿದೆ.
ಕಾರ್ಯಾಚರಣೆ ವೇಳೆ ಪಾಕಿಸ್ತಾನದ ದೋಣಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕರಾವಳಿ ರಕ್ಷಣಾ ಪಡೆ ದೋಣಿಯನ್ನು ಸುತ್ತುವರಿದು ಸೆರೆ ಹಿಡಿಯುವಲ್ಲಿ ಯಶ್ವಿಯಾಗಿದೆ. ಅಲ್–ಮದೀನಾ (AL-MADINA) ಎಂಬ ಹೆಸರಿನ ಆ ಪಾಕಿಸ್ತಾನಿ ದೋಣಿಯಲ್ಲಿ ಒಟ್ಟು 09 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

ಕಾರ್ಯಾಚರಣೆ ವೀಡಿಯೋ ಇಲ್ಲಿದೆ ;
In a swift and precise night operation, an @IndiaCoastGuard Ship whilst on patrol in #Arabian sea sighted a #Pakistani Fishing Boat inside #Indian waters near the International Maritime Boundary Line on 14 Jan 26. On being challenged, the boat attempted to flee towards Pakistan… pic.twitter.com/DEz1aPBOed
— Indian Coast Guard (@IndiaCoastGuard) January 15, 2026
ದೋಣಿಯ ಸಮಗ್ರ ತಪಾಸಣೆ ಮತ್ತು ದೋಣಿಯಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ದೋಣಿಯನ್ನು ಐಸಿಜಿ ಹಡಗು ಮೂಲಕ ಪೊರ್ಬಂದರ್‌ಗೆ ಎಳೆದುಕೊಂಡು ಹೋಗಲಾಯಿತು.
ಇದನ್ನೂ ಓದಿ : U19 Worldcup: ಹೆನಿಲ್ ದಾಳಿಗೆ 5 ವಿಕೆಟ್ ಪತನ: ಯುಎಸ್ಎ ವಿರುದ್ಧ ಭಾರತಕ್ಕೆ ಗೆಲುವು
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


