Breaking News

ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್‌ ರಾಪಿಡ್‌ ರೈಲ್‌ ಕಾರಿಡಾರ್‌ ಉದ್ಘಾಟಿಸಿದ ಪ್ರಧಾನಿ ಮೋದಿ

India's fastest metro and Namo Bharat Rapid Rail Corridor inaugurated by PM Narendra Modi

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಎರಡು ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಉತ್ತರ ಪ್ರದೇಶದ ಮೀರತ್‌ ನಗರದಲ್ಲಿ ಅತಿ ವೇಗದ ಮೆಟ್ರೋ ಸೇವೆಯನ್ನು ಉದ್ಘಾಟಿಸಿದ ಅವರು, ದೆಹಲಿ–ಮೀರತ್ ನಮೋ ಭಾರತ್ ರಾಪಿಡ್ ರೈಲ್ ಕಾರಿಡಾರನ್ನೂ ಲೋಕಾರ್ಪಣೆ ಮಾಡಿದರು.

ಶತಾಬ್ದಿ ನಗರ ನಿಲ್ದಾಣದಿಂದ ನಮೋ ಭಾರತ್ ಟ್ರೈನ್‌ಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಿದರು. ದೆಹಲಿ–ಮೀರತ್ ರಾಪಿಡ್ ರೈಲ್ ಕಾರಿಡಾರ್ ಸುಮಾರು 82 ಕಿಲೋಮೀಟರ್ ಉದ್ದವಿದ್ದು, ವಿವಿಧ ಹಂತಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

Advertisement

ಮೀರತ್ ಮೆಟ್ರೋ ಭಾರತದಲ್ಲೇ ಅತಿವೇಗದ ಮೆಟ್ರೋ ವ್ಯವಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದರ ಆಪರೇಷನಲ್ ವೇಗ ಪ್ರತಿ ಗಂಟೆಗೆ 120 ಕಿಲೋಮೀಟರ್ ಆಗಿದೆ. ಒಟ್ಟು 23 ಕಿಲೋಮೀಟರ್ ಉದ್ದದ ಈ ಕಾರಿಡಾರ್‌ನಲ್ಲಿ 16 ಕಿಮೀ ಎಲಿವೇಟೆಡ್ ಟ್ರ್ಯಾಕ್ ಹಾಗೂ 7 ಕಿಮೀ ಅಂಡರ್‌ಗ್ರೌಂಡ್ ಮಾರ್ಗವಿದೆ. ಈ ಮಾರ್ಗದ 21 ಕಿಲೋಮೀಟರ್ ದೂರವನ್ನು ಕೇವಲ 30 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ಇದನ್ನೂ ಓದಿ: ಭಾರತದ ಮರ್ಯಾದೆ ಹಾಳು ಮಾಡಬೇಡಿ: ಎಐ ಶೃಂಗಸಭೆಯಿಂದ ಕಾಂಗ್ರೆಸ್​​​ ಕಾರ್ಯಕರ್ತರನ್ನು ಒದ್ದು ಹೊರ ಹಾಕಿದ ಸಾರ್ವಜನಿಕರು

ಮೆಟ್ರೋದಲ್ಲಿ ಒಟ್ಟು 12 ನಿಲ್ದಾಣಗಳಿದ್ದು, ಪೀಕ್ ಅವಧಿಯಲ್ಲಿ ಪ್ರತಿ 5ರಿಂದ 10 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ. ಪೀಕ್ ಅಲ್ಲದ ಸಮಯದಲ್ಲಿ 10ರಿಂದ 15 ನಿಮಿಷಗಳಿಗೊಮ್ಮೆ ಸೇವೆ ಲಭ್ಯವಾಗಲಿದೆ.

ಇನ್ನು ದೆಹಲಿ–ಮೀರತ್ ನಮೋ ಭಾರತ್ ಕಾರಿಡಾರ್‌ನಲ್ಲಿ ಸೆಮಿ-ಹೈ ಸ್ಪೀಡ್ ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಪ್ರಯಾಣ ಸಮಯವನ್ನು ಎರಡು ಗಂಟೆಯಿಂದ ಕೇವಲ 55 ನಿಮಿಷಗಳಿಗೆ ಇಳಿಸಲಾಗಿದೆ. ಈ ರೈಲುಗಳನ್ನು ಗರಿಷ್ಠ 180 ಕಿಮೀ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಆಪರೇಷನಲ್ ಗರಿಷ್ಠ ವೇಗ 160 ಕಿಮೀ ಮತ್ತು ಸರಾಸರಿ ವೇಗ 90 ಕಿಮೀ ಆಗಿದೆ.

ದೆಹಲಿ ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮೀರತ್ ನಗರಕ್ಕೆ ಈ ಯೋಜನೆ ಮಹತ್ವದ ಸಂಪರ್ಕ ವ್ಯವಸ್ಥೆಯನ್ನು ಒದಗಿಸಲಿದೆ. ಇದರಿಂದ ದೆಹಲಿ ಮತ್ತು ಉತ್ತರ ಪ್ರದೇಶದ ನಡುವೆ ಪ್ರಯಾಣ ಸುಲಭವಾಗಲಿದ್ದು, ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು