ವಿಮಾನ ಪ್ರಯಾಣಿಕರಿಗೆ ಶಾಕ್: ಇಂಡಿಗೋದಿಂದ ಇಂಧನ ಸರ್ಚಾರ್ಜ್ ಭಾರಿ ಏರಿಕೆ; ನಾಳೆಯಿಂದ ಟಿಕೆಟ್ ದರ ದುಬಾರಿ

ದೆಹಲಿ : ವಿಮಾನ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ. ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo), ವಿಮಾನ ಇಂಧನ ಅಂದರೆ ಎಟಿಎಫ್ (Air Turbine Fuel – ATF) ದರ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳ ಇಂಧನ ಸರ್ಚಾರ್ಜ್ (Fuel Surcharges) ದರಗಳನ್ನು ಪರಿಷ್ಕರಿಸಿದೆ. ಈ ನೂತನ ದರಗಳು ಅಕ್ಟೋಬರ್ 06, 2026 ರ ಮಧ್ಯರಾತ್ರಿ 00:01 ಗಂಟೆಯಿಂದ ಬುಕ್ ಮಾಡುವ ಎಲ್ಲಾ ಹೊಸ ವಿಮಾನ ಟಿಕೆಟ್‌ಗಳಿಗೆ ಅನ್ವಯವಾಗಲಿವೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಜಾಗತಿಕ ಮತ್ತು ಭೌಗೋಳಿಕ ಉದ್ವಿಗ್ನತೆಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಎಟಿಎಫ್ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬಂದಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಎಟಿಎಫ್ ದರ ಶೇಕಡಾ 14 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಕಳೆದ ದಶಕದಲ್ಲೇ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ. ವಿಮಾನಯಾನ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಇಂಧನದ ಪಾಲು ಹೆಚ್ಚಿರುವುದರಿಂದ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಇಂಡಿಗೋ ತಿಳಿಸಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ಪರಿಷ್ಕೃತ ಇಂಧನ ಸರ್ಚಾರ್ಜ್ ದರಪಟ್ಟಿ:

ದೇಶೀಯ ಮಾರ್ಗಗಳು

0 – 500 ಕಿ.ಮೀ: ₹375

501 – 1,000 ಕಿ.ಮೀ: ₹600

1,001 – 1,500 ಕಿ.ಮೀ: ₹900

1,501 – 2,000 ಕಿ.ಮೀ: ₹1,150

2,000 ಕಿ.ಮೀ ಗಿಂತ ಹೆಚ್ಚು: ₹1,300

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ?: ಮೊಬೈಲ್ ಬೆಲೆ ಇಳಿಕೆಗೆ ಕೇಂದ್ರಕ್ಕೆ ಐಸಿಇಎ ಮಹತ್ವದ ಮನವಿ

ಅಂತರರಾಷ್ಟ್ರೀಯ ಮಾರ್ಗಗಳು:

ಸಾರ್ಕ್ (SAARC) ದೇಶಗಳು:

500 ಕಿ.ಮೀ ವರೆಗೆ: ₹1,000

501 ಕಿ.ಮೀ ಗಿಂತ ಹೆಚ್ಚು: ₹3,000

ಆಗ್ನೇಯ ಏಷ್ಯಾ (Southeast Asia): ₹5,500

ಜಿ‌ಸಿಸಿ ಮತ್ತು ಮಧ್ಯಪ್ರಾಚ್ಯ (GCC & Middle East): ₹5,500

ಉತ್ತರ ಮತ್ತು ಪೂರ್ವ ಏಷ್ಯಾ (North & East Asia): ₹5,500

ಆಫ್ರಿಕಾ (Africa): ₹6,000

ಯುರೋಪ್ (Europe): ₹10,000

ಇಂಧನ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ, ಗ್ರಾಹಕರ ಮೇಲಿನ ಪರಿಣಾಮವನ್ನು ಕನಿಷ್ಠ ಮಟ್ಟದಲ್ಲಿರಿಸಲು ಸೀಮಿತ ಪ್ರಮಾಣದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *