T20 Worldcup: ಪಂದ್ಯ ಗೆದ್ದರೂ ಕೂಡ ವಿಶ್ವಕಪ್ ಇಂದ ಹೊರಬಿದ್ದ ಪಾಕಿಸ್ತಾ‌ನ

ಪಲ್ಲೆಕೆಲೆ: ಕೊನೆಯ ಸೂಪರ್-8 ಪಂದ್ಯ ಗೆದ್ದರೂ ಕೂಡ ಪಾಕಿಸ್ತಾನ ರನ್‌ರೇಟ್ ಆಧಾರದ ಮೇಲೆ ಸೆಮಿಫೈನಲ್ಸ್‌ಗೆ ಏರಲು ಸಾಧ್ಯವಾಗದೆ ತನ್ನ ವಿಶ್ವಕಪ್ ಅಭಿಯಾನವನ್ನು ಮುಗಿಸಿದೆ.

ಇಲ್ಲಿನ ಪಲ್ಲಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು‌. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಶಹಿಬ್ಜಾದ ಫರ್ಹಾನ್ ಅವರ ಅಮೋಘ ಶತಕ (60 ಎಸೆತಗಳಲ್ಲಿ 100 ರನ್) ಮತ್ತು ಫಕರ್ ಝಮಾನ್ 42 ಎಸೆತಗಳಲ್ಲಿ 84 ರನ್ ಗಳಿಸಿ ತಂಡದ ಮೊತ್ತ 212ಕ್ಕೆ ಏರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 95 ಎಸೆತಗಳಲ್ಲಿ ‌ 176 ರನ್ ಕಲೆ ಹಾಕಿತು‌.

Advertisement

ಇದನ್ನೂ ಓದಿ: ತಂದೆಯ ಸಾವಿನ ನೋವಿನ ನಡುವೆಯೂ ತಂಡವನ್ನು ಸೇರಿಕೊಂಡ ರಿಂಕು ಸಿಂಗ್

ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 3, ದಾಸನ್ ಶನಕ 2 ಮತ್ತು ದುಶ್ಮಂತ ಚಮೀರ ಒಂದು ವಿಕೆಟ್ ಪಡೆದರು.

Advertisement

ಗುರಿ ಬೆನ್ನತ್ತಿದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ 5 ರನ್‌ಗಳ ಅಂತರದಿಂದ ಸೋಲು ಕಂಡಿತು. ತಂಡದ ಪರ ದಾಸನ್ ಶನಕ 31 ಎಸೆತಗಳಲ್ಲಿ ‌76, ಪವನ್ ರತ್ನನಾಯಕೆ 58, ಕಮಿಲ್ ಮಿಸಾರ 26, ಚರಿತ್ ಅಸಲಂಕ 25 ರನ್ ಗಳಿಸಿದರು. ಪಾಕಿಸ್ತಾನ ಪರ ಅಬ್ರಾರ್ ಅಹಮ್ಮದ್ 3, ಶಹೀನ್ ಅಫ್ರೀದಿ, ನಯೀಮ್ ಶಾ, ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆದರು.

ಇದರೊಂದಿಗೆ ಗೆಲುವು ಸಾಧಿಸಿದರೂ ಕೂಡ ರನ್ ರೇಟ್ ಆಧಾರದ ಮೇಲೆ ಪಾಕಿಸ್ತಾನ ಸೆಮಿಫೈನಲ್ಸ್‌ಗೆ ಏರಲು ಸಾಧ್ಯವಿಲ್ಲ. ಈ ಗುಂಪಿನಿಂದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಿತು‌.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು