ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 27ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್‌ಗಳ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್‌ಗಳ ಬಲಿಷ್ಠ ಮೊತ್ತ ಕಲೆಹಾಕಿತು. ತಂಡದ ಪರ ಅಭಿಷೇಕ್ ಶರ್ಮಾ 59 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಹೆನ್ರಿಕ್ ಕ್ಲಾಸೆನ್ ಕೂಡ 59 ರನ್‌ಗಳೊಂದಿಗೆ ತಂಡಕ್ಕೆ ದಿಟ್ಟ ಬೆಂಬಲ ನೀಡಿದರು. ಟ್ರಾವಿಸ್ ಹೆಡ್ 23 ರನ್‌ಗಳಿಸಿದರೆ, ಅನಿಕೇತ್ ವರ್ಮಾ 2, ನಿತೀಶ್ ಕುಮಾರ್ ರೆಡ್ಡಿ 12, ಸಲೀಲ್ ಅರೋರಾ 13, ಲಿಯಾಮ್ ಲಿವಿಂಗ್‌ಸ್ಟೋನ್ 1, ಶಿವಾಂಗ್ ಕುಮಾರ್ 12 ರನ್ ಗಳಿಸಿದರು.

ಇದನ್ನೂ ಓದಿ: IPL: ಆರ್‌ಸಿಬಿ ವಿರುದ್ಧ ಜಯಭೇರಿ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್
ಚೆನ್ನೈ ಪರ ಬೌಲಿಂಗ್‌ನಲ್ಲಿ ಜೇಮೀ ಓವರ್ಟನ್ ಮತ್ತು ಅನ್ಶುಲ್ ಕಾಂಬೋಜ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಮುಖೇಶ್ ಚೌಧರಿ 2 ವಿಕೆಟ್ ಕಬಳಿಸಿದರು.

195 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಹೋರಾಟ ನೀಡಿದರೂ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು.
ತಂಡದ ಪರ ಸಂಜು ಸ್ಯಾಮ್ಸನ್ 7, ರುತುರಾಜ್ ಗಾಯಕ್ವಾಡ್ 19, ಆಯುಷ್ ಮ್ಹಾತ್ರೆ 30, ಮ್ಯಾಟ್ ಶಾರ್ಟ್ 34, ಸರ್ಫರಾಜ್ ಖಾನ್ 25, ಶಿವಂ ದುಬೆ 21, ಜೀಮೀ ಓವರ್ಟನ್ 16, ಅನ್ಶುಲ್ ಕಾಂಬೋಜ್ 13 (ಅಜೇಯ), ನೂರ್ ಅಹ್ಮದ್ 1 (ಅಜೇಯ) ರನ್ ಗಳಿಸಿದರು. ಡೆವಾಲ್ಡ್ ಬ್ರೇವಿಸ್ ಶೂನ್ಯಕ್ಕೆ ಔಟ್ ಆದರು.
ಸನ್ರೈಸರ್ಸ್ ಪರ ಈಶಾನ್ ಮಾಲಿಂಗ 3 ವಿಕೆಟ್ ಪಡೆದು ಗೆಲುವಿನ ಹೀರೋ ಆಗಿ ಹೊರಹೊಮ್ಮಿದರೆ, ನಿತೀಶ್ ಕುಮಾರ್ ರೆಡ್ಡಿ 2, ಶಿವಂಗ್ ಕುಮಾರ್, ಪ್ರಫುಲ್ ಹಿಂಗೆ, ಸಕೀಬ್ ಹುಸೇನ್ ತಲಾ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

