Finn Allen: SRH ವಿರುದ್ಧ ಮೊದಲ ಓವರ್ ನಲ್ಲೇ ಆರ್ಭಟಿಸಿದ ಫಿನ್ ಅಲೆನ್ ಹೊಸ ದಾಖಲೆ

ಕೋಲ್ಕತ್ತ: ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಅಬ್ಬರದ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವು 226 ರನ್‌ಗಳ ಬೃಹತ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಫಿನ್ ಅಲೆನ್, ಮೊದಲ ಓವರ್‌ನಲ್ಲೇ ಪಂದ್ಯಕ್ಕೆ ಸ್ಫೋಟಕ ಆರಂಭ ನೀಡಿದರು.

Advertisement

ಇದನ್ನೂ ಓದಿ: IPL: KKR ವಿರುದ್ಧ ರೋಚಕ ಗೆಲುವು ಸಾಧಿಸಿದ SRH

ಎಸ್‌ಆರ್‌ಎಚ್ ಪರ ಮೊದಲ ಓವರ್ ಬೌಲಿಂಗ್ ಮಾಡಿದ ಡೇವಿಡ್ ಪೇನ್ ಅವರ ಮೇಲೆ ದಾಳಿ ನಡೆಸಿದ ಫಿನ್ ಅಲೆನ್, ಒಂದೇ ಓವರ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರು.

Advertisement

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಜಂಟಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಫಿನ್ ಅಲೆನ್ ಹೆಸರಿನಲ್ಲಿ ದಾಖಲಾಗಿದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಇದ್ದಾರೆ. ಅವರು 2023ರಲ್ಲಿ ಕೆಕೆಆರ್ ವಿರುದ್ಧ ಮೊದಲ ಓವರ್‌ನಲ್ಲಿ 26 ರನ್ ಸಿಡಿಸಿದ್ದರು. ಅಲ್ಲದೆ 2025 ರಲ್ಲೂ ಜೈಸ್ವಾಲ್ ವೇಗದ 22 ರನ್ ಬಾರಿಸಿದ್ದರು. ಉಳಿದಂತೆ, ಪೃಥ್ವಿ ಶಾ 2021ರಲ್ಲಿ 24 ರನ್, 2009ರಲ್ಲಿ ನಮನ್ ಓಜಾ 21 ರನ್ ಬಾರಿಸಿದ್ದರು.

Advertisement

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು