IPL: ಕೂಪರ್ ‘ಪಂಜಾಬ್ ಕಿಂಗ್’: ಗುಜರಾತ್ ಮಣಿಸಿದ ಪಂಜಾಬ್

ಪಿಸಿಎ ನ್ಯೂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿತು.

Advertisement

ಗುಜರಾತ್ ಪರ ಶುಭಮನ್ ಗಿಲ್ 39, ಜೋಸ್ ಬಟ್ಲರ್ 38, ಗ್ಲೆನ್ ಫಿಲಿಪ್ಸ್ 25, ವಾಷಿಂಗ್ಟನ್ ಸುಂದರ್ 18, ಸಾಯಿ ಸುದರ್ಶನ್ 13, ರಾಹುಲ್ ತೆವಾಟಿಯಾ 11 (ಅಜೇಯ)* ರನ್ ಗಳಿಸಿದರು. ರಶೀದ್ ಖಾನ್ (0) ಔಟ್ ಆದರು.

ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ವಿಜಯ್‌ಕುಮಾರ್ ವೈಶಾಕ್ 3 ವಿಕೆಟ್, ಯಜ್ವೇಂದ್ರ ಚಾಹಲ್ 2 ವಿಕೆಟ್, ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದು ಗುಜರಾತ್ ತಂಡವನ್ನು ಕಡಿಮೆ ಮೊತ್ತಕ್ಕೆ ತಡೆಯುವಲ್ಲಿ ಯಶಸ್ವಿಯಾದರು.

Advertisement

163 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್, 19.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ: IPL: ಅರ್ಧಶತಕದ ಓಟಕ್ಕೆಗೆ ಬ್ರೇಕ್! ಎಡವಿದ ‘ಸೀಸನ್ ಓಪನರ್ ಕಿಂಗ್’ ಸಂಜು ಸ್ಯಾಮ್ಸನ್‌

Advertisement

ಪಂಜಾಬ್ ಪರ ಕೂಪರ್ ಕಾನೋಲಿ 72 (ಅಜೇಯ)* ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರೆ, ಪ್ರಭಸಿಮ್ರನ್ ಸಿಂಗ್ 37, ಶ್ರೇಯಸ್ ಅಯ್ಯರ್ 18, ಪ್ರಿಯಾಂಶ್ ಆರ್ಯ 7, ಮಾರ್ಕೊ ಜಾನ್ಸೆನ್ 9, ಜೇವಿಯರ್ ಬಾರ್ಟ್ಲೆಟ್ 11 (ಅಜೇಯ)* ರನ್ ಗಳಿಸಿದರು. ಮಾರ್ಕಸ್ ಸ್ಟೋಯಿನಿಸ್ ಶೂನ್ಯ ರನ್‌ಗೆ ಔಟ್ ಆದರು.

ಗುಜರಾತ್ ಪರ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಅಶೋಕ್ ಶರ್ಮಾ, ಕಗಿಸೊ ರಬಾಡ, ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಕೊನೆಗೂ 3 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಪಂದ್ಯವನ್ನು ತನ್ನತ್ತ ತಿರುಗಿಸಿಕೊಂಡಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು