IPL: ಸಮೀರ್ ರಿಜ್ವಿ ಏಕಾಂಗಿ ಹೋರಾಟ: ಲಕ್ನೋ ವಿರುದ್ಧ ಡೆಲ್ಲಿಗೆ ರೋಚಕ ಜಯ

ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಬಿ ಮೈದಾನದಲ್ಲಿ ನಡೆದ ಐಪಿಎಲ್‌ನ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 18.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 141 ರನ್‌ಗಳಿಗೆ ಸೀಮಿತವಾಯಿತು.

Advertisement

ತಂಡದ ಪರ ಅಬ್ದುಲ್ ಸಮಾದ್ 36 ರನ್, ಮಿಚೆಲ್ ಮಾರ್ಷ್ 35 ರನ್ ಗಳಿಸಿದರು. ಶಹಾಬಾಜ್ ಅಹ್ಮದ್ 15, ಎಂ. ಚೌಧರಿ 14, ಐಡೆನ್ ಮಾರ್ಕ್ರಾಮ್ 11 ರನ್ ಗಳಿಸಿದರು. ಉಳಿದಂತೆ ನಿಕೋಲಸ್ ಪೂರನ್ 8, ರಿಷಬ್ ಪಂತ್ 7 ರನ್ ಗಳಿಸಿದರು. ಮೊಹ್ಸಿನ್ ಖಾನ್, ಅನ್ರಿಚ್ ನಾರ್ಟ್ಜೆ ಹಾಗೂ ಆಯುಷ್ ಬಡೋನಿ ಶೂನ್ಯಕ್ಕೆ ಔಟಾದರು.

ಡೆಲ್ಲಿ ಪರ ಲುಂಗಿ ಎನ್‌ಗಿಡಿ ಹಾಗೂ ನಟರಾಜನ್ ತಲಾ 3 ವಿಕೆಟ್‌ಗಳನ್ನು ಪಡೆದು ಲಕ್ನೋ ಬ್ಯಾಟಿಂಗ್‌ಗೆ ತೀವ್ರ ಒತ್ತಡ ಸೃಷ್ಟಿಸಿದರು. ಕುಲ್ದೀಪ್ ಯಾದವ್ 2 ವಿಕೆಟ್, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

Advertisement

ಇದನ್ನೂ ಓದಿ: IPL: ಕೂಪರ್ ‘ಪಂಜಾಬ್ ಕಿಂಗ್’: ಗುಜರಾತ್ ಮಣಿಸಿದ ಪಂಜಾಬ್

142 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ 33 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮೀರ್ ರಿಜ್ವಿ ಅವರ ಅದ್ಭುತ ಬ್ಯಾಟಿಂಗ್ ಡೆಲ್ಲಿಗೆ ಗೆಲುವಿನ ದಾರಿ ತೆರೆದಿತು. ರಿಜ್ವಿ 70 ರನ್‌ಗಳ (5 ಬೌಂಡರಿ, 4 ಸಿಕ್ಸರ್) ಮಿಂಚಿನ ಇನ್ನಿಂಗ್ಸ್ ಆಡಿದರು. ಇವರಿಗೆ ಟ್ರಿಸ್ಟಾನ್ ಸ್ಟಬ್ಸ್ 39 ರನ್‌ಗಳ ಸಹಾಯ ನೀಡಿದರು.

Advertisement

ಇತರೆ ಆಟಗಾರರಲ್ಲಿ ನಿತೀಶ್ ರಾಣಾ 15 ರನ್, ಪಾತುಮ್ ನಿಸ್ಸಂಕ 1 ರನ್ ಗಳಿಸಿದರು. ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟಾದರು.

ಲಕ್ನೋ ಪರ ಪ್ರಿನ್ಸ್ ಯಾದವ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಮೊಹ್ಸಿನ್ ಖಾನ್ ತಲಾ 1 ವಿಕೆಟ್ ಪಡೆದರು.

ಕೊನೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು