ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ರಯಾನ್ ರಿಕಲ್ಟನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 123 ರನ್ ಸಿಡಿಸಿ ಮಿಂಚಿದರು. ಅವರ ಶತಕದ ನೆರವಿನಿಂದ ಮುಂಬೈ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಇನ್ನಿಂಗ್ಸ್‌ಗೆ ವಿಲ್ ಜ್ಯಾಕ್ಸ್ 46 ರನ್‌ಗಳ ಕೊಡುಗೆ ನೀಡಿದರೆ, ಹಾರ್ದಿಕ್ ಪಾಂಡ್ಯ 31, ನಮನ್ ಧೀರ್ 22, ತಿಲಕ್ ವರ್ಮಾ 7, ಸೂರ್ಯಕುಮಾರ್ ಯಾದವ್ 5 ಮತ್ತು ರಾಬಿನ್ ಮಿಂಜ್ ಅಜೇಯ 1 ರನ್ ಗಳಿಸಿದರು.
ಇದನ್ನೂ ಓದಿ: IPL: ಫೆರೀರಾ, ಯಶಸ್ವಿ ಬ್ಯಾಟಿಂಗ್: ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ ರಾಯಲ್ ಗೆಲುವು

ಹೈದರಾಬಾದ್ ಪರ ಪ್ರಫುಲ್ ಹಿಂಗೆ 2 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ, ಎಶಾನ್ ಮಲಿಂಗ ಹಾಗೂ ಸಾಕಿಬ್ ಹುಸೇನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
244 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಆರಂಭದಿಂದಲೇ ದಾಳಿಯ ಆಟ ಪ್ರದರ್ಶಿಸಿತು. ಕೇವಲ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿ 6 ವಿಕೆಟ್‌ಗಳ ಅದ್ಭುತ ಜಯ ದಾಖಲಿಸಿತು.
ತಂಡದ ಪರ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 76 ರನ್ ಬಾರಿಸಿ ಗೆಲುವಿನ ಅಡಿಪಾಯ ಹಾಕಿದರು. ಅಭಿಷೇಕ್ ಶರ್ಮಾ 45 ರನ್‌ಗಳ ಚುರುಕಿನ ಆಟವಾಡಿದರೆ, ಹೆನ್ರಿಕ್ ಕ್ಲಾಸೆನ್ ಅಜೇಯ 65 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ಪಂದ್ಯವನ್ನು ಹೈದರಾಬಾದ್ ಪರ ಮುಕ್ತಾಯಗೊಳಿಸಿದರು.
ನಿತೀಶ್ ಕುಮಾರ್ ರೆಡ್ಡಿ 21 ಹಾಗೂ ಸಲಿಲ್ ಅರೋರಾ ಅಜೇಯ 30 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಇಶಾನ್ ಕಿಶನ್ ಶೂನ್ಯಕ್ಕೆ ಔಟಾದರು.
ಮುಂಬೈ ಪರ ಅಲ್ಲಾ ಗಜನ್ಫರ್ 2 ವಿಕೆಟ್ ಪಡೆದರೆ, ಟ್ರೆಂಟ್ ಬೋಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
ರಯಾನ್ ರಿಕಲ್ಟನ್ ಅವರ ಅಜೇಯ ಶತಕ ವ್ಯರ್ಥವಾದರೂ, ಟ್ರಾವಿಸ್ ಹೆಡ್ ಹಾಗೂ ಕ್ಲಾಸೆನ್ ಸ್ಫೋಟಕ ಆಟದ ನೆರವಿನಿಂದ ಹೈದರಾಬಾದ್ ಹೈ-ಸ್ಕೋರಿಂಗ್ ಥ್ರಿಲ್ಲರ್‌ನಲ್ಲಿ ಸ್ಮರಣೀಯ ಗೆಲುವು ದಾಖಲಿಸಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

