Breaking News

ಒಂದೇ ಒಂದು ದಾಳಿಯಾದರು ಯುದ್ದವೆಂದು ಪರಿಗಣಿಸುತ್ತೇವೆ: ಇರಾನ್ ತಿರುಗೇಟು

ಟೆಹ್ರಾನ್: ಯುದ್ಧ ನೌಕೆ ಬರುತ್ತಿದೆ ಎಂದು ಬೆದರಿಕೆ ಹಾಕಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ತಿರುಗೇಟು ನೀಡಿದ್ದು, ಒಂದೇ ಒಂದು ದಾಳಿಯಾದರೂ ಯುದ್ಧವೆಂದು ಪರಿಗಣಿಸುತ್ತೇವೆಂದು ಎಚ್ಚರಿಕೆ ನೀಡಿದೆ.

ಈ ಬಾರಿ ಯಾವುದೇ ದಾಳಿ ನಡೆದರೂ, ನಾವು ಅದನ್ನು ಸಂಪೂರ್ಣ ಯುದ್ಧವೆಂದು ಪರಿಗಣಿಸಿ ಅತ್ಯಂತ ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆಂದು ಇರಾನ್ ಸೈನ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Advertisement

ಇದನ್ನೂ ಓದಿ: ವ್ಯಾಪಾರ ಒಪ್ಪಂದ: ಭಾರತದಲ್ಲಿ ಯುರೋಪಿಯನ್ ಕಾರುಗಳ ಬೆಲೆಯಲ್ಲಿ ಇಳಿಕೆ

ಹಿಂಸಾಚಾರ ಪೀಡಿತ ಮಧ್ಯಪ್ರಾಚ್ಯ ದೇಶದ ಕಡೆಗೆ ಅಮೆರಿಕಾದ ಯುದ್ಧನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಎಚ್ಚರಿಕೆ ನೀಡಿದೆ.

ನಿರಂತರ ಮಿಲಿಟರಿ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಅಯತೊಲ್ಲಾ ಖಮೇನಿ ಆಡಳಿತವು ”ತನ್ನ ಬಳಿ ಇರುವ ಎಲ್ಲಾಕ ಬಲವನ್ನೂ” ಬಳಸುವುದನ್ನು ಖಚಿತಪಡಿಸುತ್ತದೆ ಎಂದು ಇರಾನ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬಾರಿ, ನಾವು ಯಾವುದೇ ದಾಳಿಯನ್ನು – ಸೀಮಿತ, ಅನಿಯಮಿತ, ಶಸ್ತ್ರಚಿಕಿತ್ಸಾ, ಚಲನಶೀಲ, ಅವರು ಅದನ್ನು ಏನೇ ಕರೆದರೂ ನಮ್ಮ ವಿರುದ್ಧದ ಸಂಪೂರ್ಣ ಯುದ್ಧವೆಂದು ಪರಿಗಣಿಸುತ್ತೇವೆ. ಇದನ್ನು ಪರಿಹರಿಸಲು ನಾವು ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತೇವೆಂದು ತಿಳಿಸಿದ್ದಾರೆ.

ನಿನ್ನೆಯಷ್ಟೇ ಇರಾನ್’ಗೆ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್‌ ಅವರು, ನಮ್ಮ ದೊಡ್ಡ ಪಡೆಗಳು ಇರಾನ್ ಕಡೆ ಹೋಗುತ್ತಿವೆ. ಇರಾನ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಮುಂಬರುವ ದಿನಗಳಲ್ಲಿ ಅರಬ್ಬಿ ಸಮುದ್ರ ಅಥವಾ ಪರ್ಶಿಯನ್ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ನೌಕಾ ದಾಳಿ ನಡೆಸಲಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಅಮೆರಿಕ ರಕ್ಷಣಾ ಇಲಾಖೆ ತನ್ನ ಯುದ್ಧ ವಿಮಾನ ಅನಾಮಿಕ ಸ್ಥಳದಲ್ಲಿ ಇಳಿಯುತ್ತಿರುವ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಥಾಡ್ ಮತ್ತು ಪೇಟ್ರಿಯಾಟ್‌ನಂತಹ ಕ್ಷಿಪಣಿ ದಾಳಿ ತಡೆ ವ್ಯವಸ್ಥೆಗಳನ್ನೂ ಅಮೆರಿಕ ನಿಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು