ದ್ವೀಪ : ಜೀವನದ ಜಂಜಾಟದಿಂದ ದೂರವಿರಲು ಬಯಸುವವರಿಗೆ ಫಿನ್ಲ್ಯಾಂಡ್ನ ಸೂಪರ್ಶೀ ದ್ವೀಪ (Super She Island) ಒಂದು ಉತ್ತಮ ತಾಣವಾಗಿದೆ. ಈ ದ್ವೀಪವು ವಿಶೇಷವಾಗಿ ಮಹಿಳೆಯರಿಗಾಗಿ ಮೀಸಲಾಗಿದ್ದು, ಪುರುಷರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇಲ್ಲಿ ಮಹಿಳೆಯರು ಏಕಾಂಗಿಯಾಗಿ ಅಥವಾ ತಮ್ಮ ಸ್ನೇಹಿತೆಯರೊಂದಿಗೆ ಪ್ರಶಾಂತವಾಗಿ ಸಮಯ ಕಳೆಯಬಹುದು. ಇದು ವೀಕೆಂಡ್ ಟ್ರಿಪ್ಗಳಿಗೆ ಹೇಳಿಮಾಡಿಸಿದ ಜಾಗವಾಗಿದ್ದು, ಒತ್ತಡದಿಂದ ಮುಕ್ತಿ ನೀಡುತ್ತದೆ.
ಏಕಕಾಲದಲ್ಲಿ ಎಂಟು ಮಹಿಳೆಯರಿಗೆ ಮಾತ್ರ ಪ್ರವೇಶ ;

ಪಿನ್ ಲ್ಯಾಂಡ್ನ ಹೆಲ್ಸಿಂಕಿ ನಗರದಿಂದ 100 ಕಿಲೋಮೀಟರ್ ದೂರದಲ್ಲಿರುವ ಬಾಲ್ಟಿಕ್ ಸಮುದ್ರ ಕರಾವಳಿಯ 8.4 ಎಕರೆ ದ್ವೀಪವು ಮಹಿಳೆಯರಿಗಾಗಿ ಮೀಸಲಾಗಿದೆ. ಇಲ್ಲಿ ಏಕಕಾಲದಲ್ಲಿ ಎಂಟು ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಸಮುದ್ರದ ಅಲೆಗಳು, ಪ್ರಕೃತಿ ಸೌಂದರ್ಯದ ನಡುವೆ ಯೋಗ, ಧ್ಯಾನ, ದಟ್ಟ ಅಡವಿಯಲ್ಲಿ ನಡಿಗೆ, ಸಾಹಸ ಚಟುವಟಿಕೆಗಳು, ಉಗಿಸ್ನಾನದಂತಹ ಅನುಭವಗಳನ್ನು ಮಹಿಳೆಯರು ಪಡೆಯಬಹುದು. ಇಲ್ಲಿನ ಎಲ್ಲಾ ಸೇವಾ ಸಿಬ್ಬಂದಿ, ಅಂದರೆ ಸಪ್ಲೈಯರ್, ಕುಕ್, ಕ್ಲೀನರ್, ಟ್ರೇನರ್ ಎಲ್ಲರೂ ಮಹಿಳೆಯರೇ ಆಗಿದ್ದಾರೆ.
ಇದನ್ನೂ ಓದಿ :ಋತುಸ್ರಾವದ ಸಾಕ್ಷಿ ಕೇಳಿದ ಉಪನ್ಯಾಸಕಿ! ಒತ್ತಡದಿಂದ ವಿದ್ಯಾರ್ಥಿನಿ ಸಾವು
ಮಾಜಿ ಸಿಇಒ ಕ್ರಿಸ್ಟಿನಾ ರಾತ್ ಅವರು ಕಾರ್ಪೊರೇಟ್ ಜಗತ್ತಿನ ಒತ್ತಡದಿಂದ ಮಹಿಳೆಯರನ್ನು ಮುಕ್ತಗೊಳಿಸಲು ಈ ದ್ವೀಪವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಮಹಿಳೆಯರು ಮುಕ್ತವಾಗಿ ಓಡಾಡಲು ಮತ್ತು ಒಂಟಿಯಾಗಿ ಸಮಯ ಕಳೆಯಲು ಅವಕಾಶವಿದೆ. ದುರಸ್ತಿ ಕೆಲಸಗಳಿಗಾಗಿ ಮಾತ್ರ ಪುರುಷರಿಗೆ ಸೀಮಿತ ಪ್ರವೇಶ ನೀಡಲಾಗುತ್ತದೆ. ಈ ಕಾರಣದಿಂದಾಗಿ ಈ ದ್ವೀಪವನ್ನು ‘ಮಹಿಳೆಯರ ಸ್ವರ್ಗ’ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ :ಹೊಸ ದಾಖಲೆಯತ್ತ ಕಾಂತಾರ- ಚಾಪ್ಟರ್ 1
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

