ಋತುಸ್ರಾವದ ಸಾಕ್ಷಿ ಕೇಳಿದ ಉಪನ್ಯಾಸಕಿ! ಒತ್ತಡದಿಂದ ವಿದ್ಯಾರ್ಥಿನಿ ಸಾವು

Lecturer asked for evidence of menstruation for being late to college! Student dies from stress in Hyderabad

ಹೈದರಾಬಾದ್:‌ ಋತುಸ್ರಾವದ ಸಮಯದಲ್ಲಿ ಯುವತಿಯರು ಹೊಟ್ಟೆ ನೋವಿನಂತಹ ಕೆಲವೊಂದು ದೈಹಿಕ ನೋವು, ಮಾನಸಿಕ ಕಿರಿಕಿರಿಗಳನ್ನು ಅನುಭವಿಸುತ್ತಾರೆ. ಅತಿಯಾದ ಹೊಟ್ಟೆ ನೋವು ಅನೇಕರನ್ನು ಕಾಡುತ್ತದೆ. ಅದರಂತೆ, ತಿಂಗಳ ಋತುಸ್ರಾವದ ಹಿನ್ನೆಲೆ ಕಾಲೇಜಿಗೆ ಬರುವಾಗ ತಡವಾಗಿ ಬಂದ ವಿದ್ಯಾರ್ಥಿನಿ ಬಳಿ ಉಪನ್ಯಾಸಕರೊಬ್ಬರು ಋತುಸ್ರಾವದ ಸಾಕ್ಷಿ ಕೇಳಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಇದರಿಂದಾಗಿ ತೀವ್ರ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಹೈದರಾಬಾದ್‌ನ ಮಲ್ಕಜ್‌ಗಿರಿಯ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ 19 ವರ್ಷದ ವರ್ಷಿಣಿ, ಕಾಲೇಜಿಗೆ ತಡವಾಗಿ ಬಂದಿದ್ದಾಳೆ. ಹೀಗಾಗಿ ಉಪನ್ಯಾಸಕರು ವರ್ಷಿಣಿಯನ್ನು ತರಗತಿಯೊಳಗೆ ಬಿಡಲು ನಿರಾಕರಿಸಿದರು. ಈ ವೇಳೆ ಆಕೆ, ತಾನು ಋತುಸ್ರಾವದ ಕಾರಣದಿಂದ ತಡವಾಯಿತು ಎಂದು ಹೇಳಿದ್ದಾಳೆ.

Advertisement

ಇದನ್ನೂ ಓದಿ: ಹೆಂಡತಿ, ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ಕೊಲೆ; ಆರೋಪಿಯೂ ಆತ್ಮಹತ್ಯೆ

ಇದನ್ನು ನಂಬದ ಉಪನ್ಯಾಸಕಿ, ವರ್ಷಿಣಿ ಜೊತೆ ಮುಟ್ಟಿನ ಸಾಕ್ಷಿ ಕೇಳಿದ್ದಾರೆ. ವರ್ಷಿಣಿಯ ಸಹಪಾಠಿಗಳ ಪ್ರಕಾರ, ಆಕೆಯನ್ನು ಅವಮಾನಿಸಿ ನಟನೆ ಎಂದು ನಿಂದಿಸಿಲಾಗಿದೆ. ಇದರಿಂದ ತೀವ್ರವಾಗಿ ನೊಂದ ವರ್ಷಿಣಿ ಮನೆಗೆ ಹಿಂತಿರುಗಿದ್ದಾಳೆ. ವರದಿಗಳ ಪ್ರಕಾರ, ಅವಳು ಮನೆಗೆ ತಲುಪಿದ ತಕ್ಷಣ ಕುಸಿದು ಬಿದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ವರ್ಷಿಣಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Advertisement

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಅವಳು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವಮಾನ ಮತ್ತು ಒತ್ತಡದಿಂದಾಗಿ  ಮೃತಪಟ್ಟಿದ್ದಾಳೆ ಎಂದು ವರ್ಷಿಣಿ ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಯಾವ ದಿನದಂದು ನಡೆದಿದೆ ಎಂಬ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು