ಕನ್ನಡದ ಜನಪ್ರಿಯ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಖಾಸಗಿ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಯ ವೇಳೆ ಈ ಕೃತ್ಯ ನಡೆದಿದೆ. ಕ್ರಿಕೆಟ್ ಟೂರ್ನಿಯ ಎರಡನೇ ದಿನದಂದು ನಟಿ ವಾಶ್‌ರೂಂಗೆ ಹೋದಾಗ, ಕಿಡಿಗೇಡಿಯೊಬ್ಬರು ಅವರ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಅಕ್ರಮವಾಗಿ ಚಿತ್ರೀಕರಿಸಿದ್ದಾರೆ.
ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯು ಅದನ್ನು ನೇರವಾಗಿ ನಟಿಗೆ ಕಳುಹಿಸುವ ಬದಲು, ಅವರ ಆಪ್ತ ಸ್ನೇಹಿತೆಗೆ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಕಳುಹಿಸಿದ್ದಾನೆ. ವಿಡಿಯೋ ವೈರಲ್ ಮಾಡಬಾರದೆಂದರೆ ದೊಡ್ಡ ಮೊತ್ತದ ಹಣ ನೀಡಬೇಕು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆರೋಪಿಯು ಕೇವಲ ಸಂದೇಶದ ಮೂಲಕ ಮಾತ್ರವಲ್ಲದೆ, ವಿಡಿಯೋ ಕಾಲ್ ಮಾಡಿಯೂ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಶ್ಮಿ ಲೀಲಾ ಇನ್ನಿಲ್ಲ
ತಮಗೆ ಎದುರಾದ ಈ ಮುಜುಗರದ ಮತ್ತು ಕಿರುಕುಳದ ಘಟನೆಯ ಕುರಿತು ನಟಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಕಳುಹಿಸಿರುವ ಫೋಟೋಗಳು ಮತ್ತು ವಿಡಿಯೋ ಕಾಲ್‌ನ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇನ್‌ಸ್ಟಾಗ್ರಾಮ್ ಖಾತೆಯ ಐಪಿ ಅಡ್ರೆಸ್ ಆಧಾರದ ಮೇಲೆ ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

