ಮಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಕೃಷಿ ವಲಯದ ಸಮ್ಮಿಲನದ ಮೂಲಕ ಮಂಗಳೂರಿನ ಉದ್ಯಮಿ ವಿವೇಕ್ ರಾಜ್ (Vivek Raj) ಹೊಸ ಇತಿಹಾಸ ಬರೆಯುತ್ತಿದ್ದಾರೆ. ಎಐ (Artificial Intelligence) ಆಧಾರಿತ ಹೈಡ್ರೋಪೋನಿಕ್ಸ್ (ಜಲಕೃಷಿ) ತಂತ್ರಜ್ಞಾನ ಅಭಿವೃದ್ಧಿಗಾಗಿ ಅವರು ಬರೋಬ್ಬರಿ 214 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.ದಶಕದ ಹಿಂದೆ ಬರಗಾಲದಿಂದಾಗಿ 5,000 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆ ನಷ್ಟವಾಗಿ ಭಾರಿ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಈ ಸೋಲನ್ನೇ ಸವಾಲಾಗಿ ಸ್ವೀಕರಿಸಿದ ವಿವೇಕ್, ಸಂಶೋಧನೆಯ ಮೂಲಕ ಒಳಾಂಗಣ ಕೃಷಿಗೆ (Indoor Farming) ಎಐ ತಂತ್ರಜ್ಞಾನವನ್ನು ಅಳವಡಿಸಿದರು.
ಬೆಳಕು, ತಾಪಮಾನ ಮತ್ತು ತೇವಾಂಶವನ್ನು ನಿಯಂತ್ರಿಸುವ ‘ಎಐ-ಚಾಲಿತ ಸ್ಮಾರ್ಟ್ ಎಲ್ ಇಡಿ ವ್ಯವಸ್ಥೆ’ಯನ್ನು ಅಭಿವೃದ್ಧಿಪಡಿಸಿದ್ದಾರೆ. ಗಿಡಗಳಿಗೆ ರೋಗ ಬರುವ ಮುನ್ನವೇ ಎಐ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚುವ ಈ ತಂತ್ರಜ್ಞಾನಕ್ಕೆ ಅವರು ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಜರ್ಮನಿಯಿಂದ ನಾಲ್ಕು ಅಂತರಾಷ್ಟ್ರೀಯ ಪೇಟೆಂಟ್ ಪಡೆದಿದ್ದಾರೆ. ಇದೀಗ 16 ಎಕರೆ ಪ್ರದೇಶದಲ್ಲಿ ಎಐ ಚಾಲಿತ ಹೈಡ್ರೋಪೋನಿಕ್ಸ್ ಕೃಷಿ ಆರಂಭಿಸಲು 214 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಮಾರ್ಚ್ 6 ರಿಂದ ಅಧಿವೇಶನ ಆರಂಭ; ಸಿದ್ದರಾಮಯ್ಯರಿಂದ ದಾಖಲೆಯ 17ನೇ ಬಜೆಟ್ ಮಂಡನೆ!
ಇಲ್ಲಿದೆ ನೋಡಿ ವಿಡಿಯೋ

STORY | Indian entrepreneur to invest Rs 214 cr on AI-powered hydroponic farming
An Indian entrepreneur who lost his entire crop to drought a decade ago is investing Rs 214 crore in artificial intelligence-enabled hydroponic farming to grow high-value spices and medicinal plants… https://t.co/w2FUumuunh
— Press Trust of India (@PTI_News) February 16, 2026
ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ದೆಹಲಿಯಲ್ಲಿ ನಡೆಯುತ್ತಿರುವ 5 ದಿನಗಳ ಜಾಗತಿಕ ಎಐ ಶೃಂಗಸಭೆಗೆ (Global AI Summit) ಇವರನ್ನು ಭಾಷಣಕಾರನಾಗಿ ಆಹ್ವಾನಿಸಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಈ ಶೃಂಗಸಭೆಯನ್ನು ಉದ್ಘಾಟಿಸಿದ್ದು, ವಿವೇಕ್ ರಾಜ್ ಅವರು ಗುರುವಾರ ಇಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ. ಪನಾಮಾ ಹೈಡೋ-ಎಕ್ಸ್ (Panama Hydro-X) ಕಂಪನಿಯ ಸಿಇಒ ಆಗಿರುವ ವಿವೇಕ್, ಭಾರತದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯ ಭರವಸೆ ನೀಡಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

