Breaking News

ತರಗತಿಯಲ್ಲಿ ಶಿಕ್ಷಕ ಫುಲ್ ನಿದ್ರೆ, ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್!: ಯೂಪಿಯ ಸರಕಾರಿ ಶಾಲೆಯ ವಿಡಿಯೋ ವೈರಲ್

ಕನ್ನೌಜ್: ಶಾಲಾ ತರಗತಿಯಲ್ಲಿ ಪಾಠ ಮಾಡಬೇಕಾದ ಶಿಕ್ಷಕನೊಬ್ಬ ಬೆಂಚ್‌ ಮೇಲೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿದ್ದರೆ, ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಪುಸ್ತಕ ಹಿಡಿಯುವ ಬದಲಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್ಸ್ ಹಾಗೂ ವಿಡಿಯೋಗಳನ್ನು ಸ್ಕ್ರಾಲ್ ಮಾಡುತ್ತಾ ಕುಳಿತಿರುವ ಭೀಕರ ದೃಶ್ಯವೊಂದು ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಬೆಳಕಿಗೆ ಬಂದಿದೆ.

ಕನ್ನೌಜ್ ಜಿಲ್ಲೆಯ ‘ಸಿಕ್ರೋರಿ ಸಂಯುಕ್ತ ವಿದ್ಯಾಲಯ’ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಶಾಲಾ ವೇಳೆಯಲ್ಲೇ ಶಿಕ್ಷಕ ತರಗತಿಯ ಡೆಸ್ಕ್ ಅಥವಾ ಚೇರ್ ಮೇಲೆ ಆರಾಮವಾಗಿ ಮಲಗಿ ಸವಿನಿದ್ರೆ ಮಾಡುತ್ತಿರುವುದು ಕಂಡುಬಂದಿದೆ. ಕಲಿಯಬೇಕಾದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕನ ನಿದ್ರೆಯ ದುರ್ಲಾಭ ಪಡೆದು, ಮೊಬೈಲ್ ಫೋನ್‌ಗಳನ್ನು ಹಿಡಿದು ಗೇಮ್ ಆಡುತ್ತಾ ಸಮಯ ಕಳೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಡಿ: ಸಾಲು ಸಾಲು ರಾಜೀನಾಮೆಗೆ ಮುಂದಾದ ಶಾಸಕರು

ಇಲ್ಲಿದೆ ನೋಡಿ ವಿಡಿಯೋ:

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ಹಾಗೂ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ, ಅಧಿಕಾರಿಗಳ ಮೇಲ್ವಿಚಾರಣೆ (Monitoring System) ಹಾಗೂ ಶಿಕ್ಷಕರ ಬೇಜವಾಬ್ದಾರಿ ವರ್ತನೆಯ ಕುರಿತು ಪೋಷಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ಘಟನೆ ಸಂಬಂಧ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ಶಿಕ್ಷಕನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *