ಬೆಂಗಳೂರು: ಕರ್ನಾಟಕವು 2025 ರಲ್ಲಿ 198 ಅಂಗಾಂಗ ದಾನಗಳನ್ನು ದಾಖಲಿಸುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಅಂಗಾಂಗ ದಾನಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಧನೆಯು ರಾಜ್ಯದ ಅಂಗಾಂಗ ಕಸಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023 ರಲ್ಲಿ, ರಾಜ್ಯವು 178 ಅಂಗಾಂಗ ದಾನಗಳನ್ನು ವರದಿ ಮಾಡಿತ್ತು. 2025 ರಲ್ಲಿ 198 ಅಂಗಾಂಗ ದಾನಗಳೊಂದಿಗೆ, ಕರ್ನಾಟಕವು ತನ್ನ ಹಿಂದಿನ ದಾಖಲೆಯನ್ನು ಮೀರಿಸಿದೆ ಎಂದಿದ್ದಾರೆ. ಆರೋಗ್ಯ ಇಲಾಖೆಯ ಪ್ರಕಾರ, ಈ ಸಾಧನೆಯೊಂದಿಗೆ ಕರ್ನಾಟಕವು 2025 ರಲ್ಲಿ ಅಂಗಾಂಗ ದಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ಕರ್ನಾಟಕದ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಣೆ
ರಾಜ್ಯಗಳ ಪೈಕಿ, 267 ಅಂಗಾಂಗ ದಾನಗಳೊಂದಿಗೆ ತಮಿಳುನಾಡು ಅಗ್ರಸ್ಥಾನದಲ್ಲಿದ್ದರೆ, 205 ಅಂಗಾಂಗ ದಾನಗಳೊಂದಿಗೆ ತೆಲಂಗಾಣ ಎರಡನೇ ಸ್ಥಾನದಲ್ಲಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಕರ್ನಾಟಕವು 198 ಅಂಗಾಂಗ ದಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಮಹಾರಾಷ್ಟ್ರ ಮತ್ತು ಗುಜರಾತ್ ಕ್ರಮವಾಗಿ 153 ಮತ್ತು 152 ಅಂಗಾಂಗ ದಾನಗಳನ್ನು ವರದಿ ಮಾಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

