ಬೆಂಗಳೂರು : ಇತ್ತೀಚೆಗೆ ಸ್ಲೀಪರ್ ಕೋಚ್ಗಳು ಹಾಗೂ ಏರ್ ಕಂಡಿಷನರ್ ಬಸ್ಗಳಲ್ಲಿ ಸಂಭವಿಸಿದ ಅಗ್ನಿ ಅವಘಡಗಳ ಹಿನ್ನೆಲೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮಹತ್ವದ ಭದ್ರತಾ ಕ್ರಮಕ್ಕೆ ಮುಂದಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಸ್ಲೀಪರ್ ಬಸ್ಗಳಲ್ಲಿ ಡ್ಯಾಶ್ ಕ್ಯಾಮ್ಗಳನ್ನು ಅಳವಡಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಹೊಸ ಕಾನೂನು ಜಾರಿ ;

ಈ ಕ್ರಮದ ಮೂಲಕ ಚಾಲಕರ ವರ್ತನೆ ಹಾಗೂ ಚಾಲನಾ ಶೈಲಿಯನ್ನು ನಿಗಾ ವಹಿಸಿ, ದೀರ್ಘ ದೂರ ಪ್ರಯಾಣಗಳ ವೇಳೆ ಕರ್ನಾಟಕದ ಹೆದ್ದಾರಿಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ರಾತ್ರಿ ಪ್ರಯಾಣದ ಸುರಕ್ಷತೆಯ ಬಗ್ಗೆ ಸಾರ್ವಜನಿಕ ಭರವಸೆ ಹೆಚ್ಚಿದ ಹಿನ್ನೆಲೆಯಲ್ಲಿ, ಕೆಎಸ್ಆರ್ಟಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಸಂಸ್ಥೆಯ ಅಧಿಕಾರಿಗಳು ಹೇಳಿರುವಂತೆ, ಪ್ರಯಾಣಿಕರ ಸುರಕ್ಷತೆ ಅವರ ಮೊದಲ ಆದ್ಯತೆ, ಹೊಸ ಕಾನೂನು ಜಾರಿಗೆ ತರಲಾಗಿದೆ.
ನಿಯಮಿತ ಸುರಕ್ಷತಾ ಪರೀಕ್ಷೆಗಳು ಮತ್ತು ಕಾರ್ಯನಿರ್ವಹಣಾ ಪ್ರೋಟೋಕಾಲ್ ;
ಫೈರ್ ಡಿಟೆಕ್ಷನ್ ಮತ್ತು ಸಪ್ರೆಷನ್ ಸಿಸ್ಟಮ್ಗಳು (FDSS) ಇವು ಆಧುನಿಕ ಸ್ಲೀಪರ್ ಬಸ್ಗಳಲ್ಲಿ ಅಳವಡಿಸಲಾಗಿದ್ದು, ಸಂಭವನೀಯ ಅಗ್ನಿ ಅಪಾಯವನ್ನು ಹೆಚ್ಚು ಗಂಭೀರವಾಗುವ ಮೊದಲು ಪತ್ತೆ ಹಚ್ಚಿ ನಿಯಂತ್ರಿಸಲು ವಿನ್ಯಾಸಗೊಳಿಸಲಾಗಿದೆ.
ಡ್ಯಾಶ್ ಕ್ಯಾಮ್ಗಳನ್ನು ಚಾಲಕರ ವರ್ತನೆ ಮತ್ತು ಚಾಲನಾ ಶೈಲಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ಅಳವಡಿಸಲಾಗಿದೆ. ಇತರೆ ನಿಯಮಿತ ಸುರಕ್ಷತಾ ಪರೀಕ್ಷೆಗಳು ಮತ್ತು ಕಾರ್ಯನಿರ್ವಹಣಾ ಪ್ರೋಟೋಕಾಲ್ಗಳು, ದೀರ್ಘದೂರ ಪ್ರಯಾಣಗಳಲ್ಲಿ ಪ್ರಯಾಣಿಕರ ಭದ್ರತೆಯನ್ನು ಹೆಚ್ಚಿಸಲು ಹಾಗೂ ಈ ಕ್ರಮಗಳು, ವಿಶೇಷವಾಗಿ ರಾತ್ರಿ ಪ್ರಯಾಣದ ವೇಳೆ ಸುರಕ್ಷಿತ ಪ್ರಯಾಣ ಅನುಭವವನ್ನು ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
ಡ್ಯಾಶ್ ಕ್ಯಾಮ್ಗಳ ಅಳವಡಿಕೆಯ ಜೊತೆಗೆ, ಕೆಎಸ್ಆರ್ಟಿಸಿ ತನ್ನ ಸ್ಲೀಪರ್ ಬಸ್ಗಳಲ್ಲಿ ಹಲವು ಭದ್ರತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ: ತುರ್ತು ಚಿಕಿತ್ಸಾ (First Aid) ಕಿಟ್ಗಳು, ಸ್ಪಷ್ಟವಾಗಿ ಗುರುತಿಸಲಾದ ತುರ್ತು ನಿರ್ಗಮನ ದ್ವಾರಗಳು
ಪ್ಯಾನಿಕ್ ಬಟನ್ಗಳು ಇತ್ಯಾದಿಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ಈ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು.

