ಮುಂಬೈ: ಇಲ್ಲಿ ನಡೆಯಿತ್ತಿರುವ ರಣಜಿ ಪಂದ್ಯಾಟದ ಕ್ವಾರ್ಟರ್ ಫೈನಲ್ಸ್ನ ಎರಡನೇ ಇನ್ನಿಂಗ್ಸ್ ನಲ್ಲಿ 325 ರನ್ಗಳನ್ನು ಚೇಸ್ ಮಾಡಿ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಕರ್ನಾಟಕ ತಂಡ ಸೆಮಿಫೈನಲ್ಸ್ಗೆ ಲಗ್ಗೆ ಇಟ್ಟಿದೆ
ಇಲ್ಲಿನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ನಾಲ್ಕನೇ ಕ್ವಾರ್ಟರ್ ಫೈನಲ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಕರ್ನಾಟಕದ ಬೌಲರ್ಗಳ ದಾಳಿಗೆ ಸಿಲುಕಿ ಕೇವಲ 120 ರನ್ಗೆ ಆಲೌಟ್ ಆಯ್ತು. ತಂಡದ ಪರ ಅಖಿಲ್ ಹೆರ್ವೇಡ್ಕರ್ 60 ರನ್ ಗಳಿಸಿ ಆಸರೆ ಆದರು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ ಕೃಷ್ಟ ಮತ್ತು ಶ್ರೇಯಸ್ ಗೋಪಾಲ್ ತಲಾ 3, ವಿದ್ಯಾಧರ್ ಪಾಟೀಲ್ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಸುಳ್ಯ: ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆಯಲ್ಲಿ ಗಾಂಧಿ ವೇಷಧಾರಿಯಾಗಿ ಗಮನ ಸೆಳೆದ ಎಎಪಿ ಕಾರ್ಯಕರ್ತ
ಉತ್ತಮ ಆರಂಭ ಪಡೆದ ಕರ್ನಾಟಕ ನಂತರ ಮಧ್ಯಮ ಕ್ರಮಾಂಕದಲ್ಲಿ ಸತತ ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೇ ಶಕ್ತವಾಯ್ತು. ತಂಡ ಪರ ಮಯಾಂಕ್ ಅಗರ್ವಾಲ್ 92 ರನ್ ಗಳಿಸಿದರು. ಮುಂಬೈ ಪರ ಮೋಹಿತ್ ಅವಸ್ತಿ, ತುಶಾರ್ ದೇಶ್ಪಾಂಡೆ ತಲಾ 4, ಶಾರ್ದೂಲ್ ಠಾಕೂರ್ ಮತ್ತು ಸುರ್ಯಾಂಶು ಶೆಡ್ಜೆ ತಲಾ ಒಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ನಲ್ಲಿ ಚೇತರಿಸಿಕೊಂಡ ಮುಂಬೈ ಆಕಾಶ್ ಆನಂದ್ 70, ಮುಶೀರ್ ಖಾನ್ 49, ತನುಶ್ ಕೋಟ್ಯಾನ್ 48, ತುಶಾರ್ ದೇಶ್ಪಾಂಡೆ 47, ಯಶಸ್ವಿ ಜೈಸ್ವಾಸ್ 36, ಅಖಿಲ್ ಹೆರಡ್ವೇಕರ್ 33, ಶುಯಾಂಶ್ ಶೆಡ್ಜೆ 25 ರನ್ಗಳ ಸಹಾಯದಿಂದ 377 ರನ್ ಗಳಿಸಿ ಕರ್ನಾಟಕಕ್ಕೆ 325 ರನ್ಗಳ ಗುರಿ ನೀಡಿದು.
ಅಂತಿಮ ಇನ್ನಿಂಗ್ಸ್ನಲ್ಲಿ ಮಹಾಂಕ್ ಅಗರ್ವಾಲ್ ಅವರ ವಿಕೆಟ್ ಬೇಗನೇ ಕಳೆದುಕೊಂಡರೂ ಅನುಭವಿ ಕೆ.ಎಲ್ ರಾಹುಲ್ ಅವರ ಜವಾಬ್ದಾರಿಯುತ ಆಟ, ಸ್ಮರಣ್ ರವಿಚಂದ್ರನ್ ಅವರ ತಾಳ್ಮೆಯ ಇನ್ನಿಂಗ್ಸ್ ನಿಂದ ಕರ್ನಾಟಕ 4 ವಿಕಟ್ಗಳ ರೋಚಕ ಜಯ ಸಾಧಿಸಿತು.
ಕೆ.ಎಲ್ ರಾಹುಲ್ 130 ರನ್, ಸ್ಮರಣ್ ರವಿಚಂದ್ರನ್ 83, ದೇವದತ್ತ ಪಡಿಕಲ್ 39, ವಿದ್ಯಾಧರ ಪಾಟೀಲ್ 31 ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮುಂಬೈ ಪರ ತುಶಾರ್ ದೇಶ್ಪಾಂಡೆ, ತನುಶ್ ಕೋಟ್ಯಾನ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

