ಕಾಪು: ಸಣ್ಣ ವಿಚಾರಕ್ಕೆ ಅಜ್ಜಿಯ ಬರ್ಬರ ಹತ್ಯೆ, ಇಬ್ಬರು ಸಹೋದರರು ಅರೆಸ್ಟ್

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪದ ಮಣಿಪುರದಲ್ಲಿ ನಡೆದ ಕ್ರೂರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಪ್ರವೀಣ ಮೆಂಡೋನ್ಕಾ ಮತ್ತು ವಾಲೇರಿಯನ್ ಮೆಂಡೋನ್ಕಾ ಎಂದು ಗುರುತಿಸಲಾಗಿದೆ. ಇವರು ತಮ್ಮ ನೆರೆಹೊರೆಯವರಾದ ೬೦ ವರ್ಷದ ವನಜಾ ಪೂಜಾರ್ಥಿ ಅವರೊಂದಿಗೆ ಕೆಲವೊಮ್ಮೆ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ.

Advertisement

ಸೋಮವಾರ (ಮಾರ್ಚ್ ೯) ಸಂಜೆ ೫ ಗಂಟೆಯಿಂದ ಮಂಗಳವಾರ (ಮಾರ್ಚ್ ೧೦) ಬೆಳಗ್ಗೆ ೭ ಗಂಟೆಯ ನಡುವೆ ಸಣ್ಣ ವಿಚಾರಕ್ಕೆ ಸಂಬಂಧಿಸಿದ ವಾಗ್ವಾದ ನಡೆದಿದ್ದು, ಈ ವೇಳೆ ಪ್ರವೀಣ ಮತ್ತು ವಾಲೇರಿಯನ್ ಅವರು ತೀಕ್ಷ್ಣವಾದ ಆಯುಧದಿಂದ ವನಜಾ ಪೂಜಾರ್ಥಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ವನಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಲಪಾಡಿ ಯುವಕ ಸಾವು: ರಜೆ ಮೇಲೆ ಬಂದಿದ್ದಾಗ ಸಂಭವಿಸಿದ ದುರಂತ

ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೆಎಂಸಿ ಫಾರೆನ್ಸಿಕ್ ತಂಡ, ಸೋಕೋ ತಂಡ, ಡಾಗ್ ಸ್ಕ್ವಾಡ್ ಹಾಗೂ ಫಿಂಗರ್‌ಪ್ರಿಂಟ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು