Kerala : ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳಿಗೆ ಕೇರಳ‌ದಲ್ಲಿ ನಿರ್ಬಂಧ

ಶಬರಿಮಲೆ : ನಾಳೆ ಸಂಕ್ರಮಣ‌ ಪ್ರಯುಕ್ತ ಅಯ್ಯಪ್ಪ‌ ಮಾಲಾಧಾರಿಗಳು ಶಬರಿಮಲೆ ಯಾತ್ರೆಯನ್ನು ಆರಂಭಿಸಿದ್ದು, ಈ ನಡುವೆ ಒಂದು ಘಟನೆಯು ಅಯ್ಯಪ್ಪ ಮಾಲಾಧಾರಿಗಳನ್ನು ಸ್ಥಳದಲ್ಲೇ ಪ್ರತಿಭಟನೆ ಮಾಡುವಂತೆ ಮಾಡಿದೆ.

ಕರ್ನಾಟಕದ ಶಬರಿಮಲೆ ಯಾತ್ರಿಗಳಿಗೆ ಕೇರಳದಲ್ಲಿ ನಿರ್ಬಂಧ ಆರೋಪದಲ್ಲಿ ಕೇರಳದ ಎರುಮಲೈಯಲ್ಲಿ ಶಿವಮೊಗ್ಗದ ಭದ್ರಾವತಿ ಸೇರಿದಂತೆ ಕರ್ನಾಟಕದ ಹಲವು ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ.

Advertisement

ಪ್ರತಿವರ್ಷ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೈ ಯಾತ್ರೆ ಕೈಗೊಳ್ಳುತ್ತಾರೆ. ಲಕ್ಷಾಂತರ ಭಕ್ತರು ಕೇರಳದ ಶಬರಿಮಲೈಗೆ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ತಮ್ಮ ವ್ರತವನ್ನು ಪೂರ್ಣಗೊಳಿಸುತ್ತಾರೆ. ರಾಜ್ಯದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕರ್ನಾಟಕದಿಂದ ವಾಹನ ಮಾಡಿಕೊಂಡು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದ್ರೆ ಕೇರಳದಲ್ಲಿ ಕರ್ನಾಟಕ ನೋಂದಣಿ ವಾಹನಗಳಿಗೆ ನಿರ್ಬಂಧ ಹೇರಿರುವ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಅಯ್ಯಪ್ಪಸ್ವಾಮಿ ಭಕ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Agriculture : ತಂತ್ರಜ್ಞಾನಗಳಿಂದಲೇ ಕೃಷಿಯಲ್ಲಿ ಕ್ರಾಂತಿ ಸಾಧ್ಯ : ತಜ್ಞರ ಅಭಿಪ್ರಾಯ

Advertisement

ಮಾಲಾಧಾರಿಗಳಿಗೆ ಎರುಮಲೈಯಿಂದ ಮುಂದೆ ಹೋಗಲು ಬಿಡುತ್ತಿಲ್ಲ ಎಂದು ಅಯ್ಯಪ್ಪಸ್ವಾಮಿ ಭಕ್ತರು ಆರೋಪಿಸಿದ್ದಾರೆ. ಕೇರಳದ ಪೊಲೀಸರು ಕೇರಳ ಹಾಗೂ ಇತರೆ ವಾಹನಗಳಿಗೆ ಮಾತ್ರ ಒಳಗೆ ಬಿಡುತ್ತಿದ್ದಾರೆ. ಕರ್ನಾಟಕದ ನೋಂದಣಿ ಇರುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದಾರೆ ಎಂದು ಆರೋಪ ಕೇಳಿಬಂದಿದ್ದು, ಶಿವಮೊಗ್ಗದ ಭದ್ರಾವತಿ ಸೇರಿದಂತೆ ಕರ್ನಾಟಕದ ಹಲವು ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಕೇರಳ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ಏರುಮಲೈನಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯನ್ನ ತಡೆದು ರಸ್ತೆಮಧ್ಯೆದಲ್ಲೇ ಕುಳಿತು ಮಾಲಾಧಾರಿಗಳು ಭಜನೆ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು