ಸಿಲಿಂಡರ್ ಕೊರತೆ ನಡುವೆ ಖದೀಮರ ಕೈಚಳಕ: ಬೀದರ್ ಶಾಲೆಯಲ್ಲಿ 6 ಸಿಲಿಂಡರ್ ಕಳವು

ಬೀದರ್: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತಲೆದೋರಿರುವ ಬೆನ್ನಲ್ಲೇ, ಗ್ಯಾಸ್ ಸಿಲಿಂಡರ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಜಾಲ ಸಕ್ರಿಯವಾಗಿದೆ. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಿಡಿಗೇಡಿಗಳು 6 ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ.

ಗೋರ್ಟಾ ಗ್ರಾಮದ ಶಾಲೆಯ ಅಡುಗೆ ಕೋಣೆಯ ಬೀಗ ಮುರಿದ ಕಳ್ಳರು, ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಇರಿಸಿದ್ದ 6 ಸಿಲಿಂಡರ್‌ಗಳನ್ನು ಹೊತ್ತೊಯ್ದಿದ್ದಾರೆ. ಈ ಬಗ್ಗೆ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾರ್ಚ್ 14 ರಂದು ಭಾಲ್ಕಿ ಗೋದಾಮಿನ ಬಳಿಯೇ ಮಲ್ಲಿಕಾರ್ಜುನ ಕಾಂತಪ್ಪ ಎಂಬುವವರು ಖರೀದಿಸಲು ತಂದಿದ್ದ ಸಿಲಿಂಡರ್ ಅನ್ನು ಅಪರಿಚಿತ ವ್ಯಕ್ತಿಯೊಬ್ಬ ಕದ್ದು ಪರಾರಿಯಾಗಿದ್ದಾನೆ.

Advertisement

ಇದನ್ನೂ ಓದಿ: ಯುದ್ಧದ ಬಿಕ್ಕಟ್ಟಿನ ನಡುವೆ ಮಂಗಳೂರು ಬಂದರಿಗೆ ತಲುಪಿದ ಮೊದಲ ಅನಿಲ ಹಡಗು! ಮುಚ್ಚಿದ್ದ ಹೋಟೆಲ್‌ಗಳಿಗೆ ಮರುಜೀವ

ಬೆಂಗಳೂರಿನ ಬೇಗೂರು ಸಮೀಪದ ಆರ್‌ಸಿ ಲೇಔಟ್‌ನ ಸಾಯಿ ಅಪಾರ್ಟ್‌ಮೆಂಟ್‌ಗೆ ಯುಗಾದಿ ಹಬ್ಬದ ದಿನವೇ ನುಗ್ಗಿದ ಹೆಲ್ಮೆಟ್ ಧರಿಸಿದ ಇಬ್ಬರು ಖದೀಮರು, ಸ್ಕೂಟರ್‌ನಲ್ಲಿ ಎರಡು ಸಿಲಿಂಡರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದಾಗಿ ಕಪ್ಪು ಮಾರುಕಟ್ಟೆಯಲ್ಲಿ ಇವುಗಳಿಗೆ ಭಾರಿ ಬೇಡಿಕೆ ಇರುವುದರಿಂದ ಇಂತಹ ಕಳ್ಳತನಗಳು ಹೆಚ್ಚುತ್ತಿವೆ ಎಂದು ಶಂಕಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು