ಕೆ ಎಲ್ ರಾಹುಲ್ ರನ್ ಮಳೆ; 152 ಸಿಡಿಸಿ ಐಪಿಎಲ್‌ನಲ್ಲಿ ದಾಖಲೆಗಳ ಸರಮಾಲೆ ಬರೆದ ಕನ್ನಡಿಗ

ನವದೆಹಲಿ: ಕೆ ಎಲ್ ರಾಹುಲ್ ಬ್ಯಾಟ್‌ನಿಂದ ರನ್ ಮಳೆ ಸುರಿದು ಐಪಿಎಲ್ ಇತಿಹಾಸದಲ್ಲೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ೧೯ನೇ ಆವೃತ್ತಿಯ ೩೫ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ರಾಹುಲ್ ಅಮೋಘ 152 ರನ್ ಸಿಡಿಸಿ ಮಿಂಚಿದರು.

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ರಾಹುಲ್, ಬೌಲರ್‌ಗಳ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿ ಭರ್ಜರಿ ಹೊಡೆತಗಳ ಮೂಲಕ ದೊಡ್ಡ ಮೊತ್ತ ಕಲೆಹಾಕಿದರು. ಈ ಇನ್ನಿಂಗ್ಸ್ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದ ಭಾರತೀಯ ಬ್ಯಾಟರ್ ಎಂಬ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ಸಾಧನೆ ಅಭಿಷೇಕ್ ಶರ್ಮಾ ಹೆಸರಿನಲ್ಲಿದ್ದು, ಅವರು 141 ರನ್ ಗಳಿಸಿದ್ದರು.

Advertisement

ಇನ್ನೂ ಐಪಿಎಲ್ ಇತಿಹಾಸದ ಗರಿಷ್ಠ ವೈಯಕ್ತಿಕ ಮೊತ್ತಗಳ ಪಟ್ಟಿಯಲ್ಲಿ ರಾಹುಲ್ ಮೂರನೇ ಸ್ಥಾನಕ್ಕೇರಿದ್ದಾರೆ. ಕ್ರಿಸ್ ಗೈಲ್ ಅಜೇಯ ೧೭೫ ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬ್ರೆಂಡನ್ ಮೆಕಲಂ 158 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಹುಲ್‌ರ 152 ರನ್ ಇನ್ನಿಂಗ್ಸ್ ಇದೀಗ ಈ ವಿಶೇಷ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: IPL: ಸಾಯಿ ಸುದರ್ಶನ್ ಶತಕ ವ್ಯರ್ಥ; ಗುಜರಾತ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲುವು

Advertisement

ಇದರೊಂದಿಗೆ ಐಪಿಎಲ್‌ನಲ್ಲಿ ಒಟ್ಟು ರನ್ ಗಳಿಕೆಯ ಪಟ್ಟಿಯಲ್ಲೂ ಮಹತ್ವದ ಮೈಲಿಗಲ್ಲು ತಲುಪಿದ ರಾಹುಲ್, ಎಂ ಎಸ್ ಧೋನಿ ಅವರ ದಾಖಲೆಯನ್ನು ಹಿಂದಿಕ್ಕಿದರು. ಧೋನಿ 5439 ರನ್ ಗಳಿಸಿದ್ದರೆ, ರಾಹುಲ್ ಈ ಶತಕದೊಂದಿಗೆ 5462 ರನ್‌ಗಳಿಗೆ ಏರಿ ಅಗ್ರ ರನ್‌ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದರು.

ಒಂದೇ ಪಂದ್ಯದಲ್ಲಿ ವೈಯಕ್ತಿಕ ಮೊತ್ತದ ದಾಖಲೆ, ಅಗ್ರ ರನ್‌ಗಳಿಸಿದವರ ಪಟ್ಟಿಯಲ್ಲಿ ಏರಿಕೆ, ಹಾಗೂ ಐತಿಹಾಸಿಕ ಸಾಧನೆ—ಹೀಗೆ ಹಲವು ದಾಖಲೆಗಳನ್ನು ಒಟ್ಟಿಗೆ ಬರೆಯುವ ಮೂಲಕ ರಾಹುಲ್ ಈ ಇನ್ನಿಂಗ್ಸ್‌ನ್ನು ಸ್ಮರಣೀಯವನ್ನಾಗಿಸಿದ್ದಾರೆ.

ಡೆಲ್ಲಿ ಪರ ರಾಹುಲ್ ಆಟ ಕೇವಲ ಶತಕಕ್ಕೆ ಸೀಮಿತವಾಗದೇ, ಐಪಿಎಲ್ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯುವಂತಾಯಿತು. ಅವರ ಈ ಸಿಡಿಲಬ್ಬರ ಇನ್ನಿಂಗ್ಸ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು