ರಾಹುಲ್, ರಾಣಾ ಆರ್ಭಟ ವ್ಯರ್ಥ, ಪ್ರಭಸಿಮ್ರನ್, ಶ್ರೇಯಸ್ ಭರ್ಜರಿ ಬ್ಯಾಂಟಿಗ್; ಡೆಲ್ಲಿ ವಿರುದ್ಧ ಪಂಜಾಬ್‌ಗೆ ಗೆಲುವು

ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ೩೫ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಕೆಎಲ್ ರಾಹುಲ್ ಅವರ ಸ್ಫೋಟಕ 152 ರನ್‌ಗಳ ಇನ್ನಿಂಗ್ಸ್ ಕೂಡ ಡೆಲ್ಲಿಗೆ ಗೆಲುವು ತಂದುಕೊಡಲಿಲ್ಲ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 264 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಆರಂಭಿಕ ಬ್ಯಾಟರ್ ರಾಹುಲ್ ಕೇವಲ 67 ಎಸೆತಗಳಲ್ಲಿ 16 ಬೌಂಡರಿ, 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 152 ರನ್ ಚಚ್ಚಿ ಐಪಿಎಲ್ ಇತಿಹಾಸದಲ್ಲೇ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಸಿಡಿಸಿ ಭರ್ಜರಿ ಬೆಂಬಲ ನೀಡಿದರು. ಪತುಮ್ ನಿಸ್ಸಂಕ 11 ರನ್, ಡೇವಿಡ್ ಮಿಲ್ಲರ್ ಅಜೇಯ 3 ರನ್ ಗಳಿಸಿದರು.

165 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಸಂಭ್ರಮಿಸಿತು.

ಇದನ್ನೂ ಓದಿ: ಕೆ ಎಲ್ ರಾಹುಲ್ ರನ್ ಮಳೆ; 152 ಸಿಡಿಸಿ ಐಪಿಎಲ್‌ನಲ್ಲಿ ದಾಖಲೆಗಳ ಸರಮಾಲೆ ಬರೆದ ಕನ್ನಡಿಗ

ಪ್ರಭಸಿಮ್ರನ್ ಸಿಂಗ್ 26 ಎಸೆತಗಳಲ್ಲಿ 76 ರನ್ ಸಿಡಿಸಿ ತಂಡಕ್ಕೆ ಮಿಂಚಿನ ಆರಂಭ ನೀಡಿದರು. ಪ್ರಿಯಾಂಶ್ ಆರ್ಯ 43 ರನ್, ಕೂಪರ್ ಕಾನೋಲಿ 17 ರನ್ ಗಳಿಸಿದರು.

ನಂತರ ನಾಯಕ ಶ್ರೇಯಸ್ ಅಯ್ಯರ್ ಅಜೇಯ 71 (36 ಎಸೆತ) ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರೆ, ನೇಹಲ್ ವಧೇರ 25 ಹಾಗೂ ಶಶಾಂಕ್ ಸಿಂಗ್ ಅಜೇಯ 19 ರನ್‌ಗಳೊಂದಿಗೆ ಗೆಲುವಿಗೆ ಮುದ್ರೆ ಒತ್ತಿದರು.

ಡೆಲ್ಲಿ ಪರ ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ವಿಪ್ರಜ್ ನಿಗಮ್ ತಲಾ ಒಂದು ವಿಕೆಟ್ ಕಬಳಿಸಿದರು.

ರಾಹುಲ್‌, ರಾಣಾರ ಸಿಡಿಲಬ್ಬರದ ನಡುವೆಯೂ ಪಂಜಾಬ್‌ನ ಬೃಹತ್ ಚೇಸ್ ಪಂದ್ಯದ ರೋಚಕತೆಗೆ ಮತ್ತಷ್ಟು ಮೆರುಗು ತಂದಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು