“ಅವರ ಬಳಿ ಹೋಗುವಾಗ‌ ಜಾಗ್ರತೆ”: ರೈ, ಖಾದರ್ ವಿರುದ್ಧ ಕುಕ್ಕೆ ದೇವಾಲಯ ಅಧ್ಯಕ್ಷರ ಮಾತು ವೈರಲ್, ಆಕ್ರೋಶ

ಸುಬ್ರಹ್ಮಣ್ಯ: ವಿಶ್ವಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಸ್ವಪಕ್ಷ ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ದೇವಸ್ಥಾನದ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಮಾನಾಥ್ ರೈ ಹಾಗೂ ವಿಧಾನಸಭೆಯ ಮಾಜಿ ಸಭಾಪತಿ ಮತ್ತು ಪ್ರಸ್ತುತ ಆರೋಗ್ಯ ಸಚಿವರಾಗಿರುವ ಯು.ಟಿ. ಖಾದರ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಮಂಜೇಶ್ವರ ಕೆರೆಯಲ್ಲಿ ಜೀವದ ಹಂಗು ತೊರೆದು ಯುವಕರ ಡೇಂಜರಸ್ ಸ್ಟಂಟ್ಸ್: ಪೊಲೀಸರಿಂದ ದಿಢೀರ್ ರೇಡ್, ಹಲವರು ಲಾಕ್

“ಅವರ ಬಳಿ‌ ಹೋಗುವಾಗ ಜಾಗ್ರತೆಯಿಂದ ಹೋಗಬೇಕು, ಅವರೊಳಗೆ ಸುಮಾರು ಉಂಟು” ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ತಮಗೆ ಅಧಿಕಾರ ನೀಡಿದ ಪಕ್ಷದ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರನ್ನೇ ಸಾರ್ವಜನಿಕವಾಗಿ ಈ ರೀತಿ ಟೀಕಿಸಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *