ಲಡಾಖ್‌ನ 28 ಸೌಂದರ್ಯ ತಾಣಗಳಿಗೆ ಅಧಿಕೃತ ಹೆಸರು!: ಭಾರತೀಯ ಸರ್ವೇಕ್ಷಣಾ ಇಲಾಖೆ ನಕ್ಷೆಯಲ್ಲಿ ನೂತನ ಮೈಲಿಗಲ್ಲು!

ದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್ ಆಡಳಿತದೊಂದಿಗೆ ಸಮಾಲೋಚನೆ ನಡೆಸಿದ ಭಾರತ ಸರ್ಕಾರವು, ಲಡಾಖ್ ವ್ಯಾಪ್ತಿಯಲ್ಲಿರುವ ಒಟ್ಟು 28 ಪ್ರಮುಖ ಹಾಗೂ ಆಯಕಟ್ಟಿನ ಸ್ಥಳಗಳು ಮತ್ತು ನೈಸರ್ಗಿಕ ತಾಣಗಳಿಗೆ ಅಧಿಕೃತ ಹಾಗೂ ಪ್ರಮಾಣಿತ ಹೆಸರುಗಳನ್ನು (Standard Names) ನಿಗದಿಪಡಿಸಿದೆ.

ಕೇಂದ್ರ ಗೃಹ ಸಚಿವಾಲಯದ (MHA) ನಿಕಟ ಮಾರ್ಗದರ್ಶನದಲ್ಲಿ ಈ ಹೆಸರುಗಳನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯ (Survey of India) ಅಧಿಕೃತ ಭೂಪಟದಲ್ಲಿ (Map) ಸೇರ್ಪಡೆಗೊಳಿಸಲಾಗಿದೆ.

ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಂತೆ, ಈ ಮಹತ್ವದ ನಿರ್ಧಾರದ ಕಂಪ್ಲೀಟ್ ವಿವರಗಳು ಹೀಗಿವೆ. ನೂತನವಾಗಿ ಹೆಸರಿಸಲಾದ 28 ತಾಣಗಳಲ್ಲಿ ‘ಅತಿಶಾ ಗಿರಿ’ (Atisha Giri), ‘ಬ್ರಾಂಗ್ಸಾ’ (Brangsa), ‘ಚಾಪ್ಚಿಂಗಲ್ ಪಾಸ್’ (Chapchingal Pass) ನಂತಹ ಪ್ರಮುಖ ಪರ್ವತ ಶಿಖರಗಳು, ಕಣಿವೆಗಳು ಹಾಗೂ ಹಾದಿಗಳು ಸೇರಿವೆ. ಸಾರ್ವಜನಿಕರು, ಪ್ರವಾಸಿಗರು, ಭದ್ರತಾ ಪಡೆಗಳು ಹಾಗೂ ಸಂಶೋಧಕರಿಗೆ ಈ ಸ್ಥಳಗಳ ಬಗ್ಗೆ ನಿಖರವಾದ ಮಾಹಿತಿ, ಗುರುತಿಸುವಿಕೆ ಹಾಗೂ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ.

ಇದನ್ನೂ ಓದಿ: ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಚಿವ ಯು.ಟಿ. ಖಾದರ್ ಮಹತ್ವದ ಹೇಳಿಕೆ

ಡಾಖ್‌ನ ಸಾಂಸ್ಕೃತಿಕ, ಭೌಗೋಳಿಕ ಹಾಗೂ ಪ್ರವಾಸಿ ಪ್ರಾಮುಖ್ಯತೆಯನ್ನು ಹೆಚ್ಚಿಸುವುದರ ಜೊತೆಗೆ, ರಕ್ಷಣಾ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ನಕ್ಷೆಯಲ್ಲಿ ಸ್ಪಷ್ಟತೆಯನ್ನು ತರುವುದು ಗೃಹ ಸಚಿವಾಲಯದ ಪ್ರಮುಖ ಆಶಯವಾಗಿದೆ. ಈ ನೂತನ ನಾಮಕರಣದಿಂದಾಗಿ ಲಡಾಖ್‌ನ ವಿಶಿಷ್ಟ ಭೂಪ್ರದೇಶಗಳನ್ನು ವಿಶ್ವಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪರಿಚಯಿಸಲು ಹಾದಿ ಸುಗಮವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *