ದೆಹಲಿ: ಖ್ಯಾತ ಶಿಕ್ಷಣತಜ್ಞೆ, ಸಮಾಜಸೇವಕಿ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪತ್ನಿ ಶ್ರೀಮತಿ ಲತಾ ರಜನಿಕಾಂತ್ (Latha Rajinikanth) ಅವರು ಇಂದು ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಸಮಾಜಮುಖಿ ಚರ್ಚೆ ನಡೆಸಿದರು. ಈ ಭೇಟಿಯ ವೇಳೆ, ತಮ್ಮ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಲಾಗಿರುವ ‘ಭಾರತ್ ಸೇವಾ’ ಎಂಬ ಜಾಗೃತಿ ಮತ್ತು ಸಾಮಾಜಿಕ ವೇದಿಕೆಯ ಕುರಿತು ಅವರು ಅತ್ಯಂತ ಉತ್ಸಾಹದಿಂದ ವಿಷಯಗಳನ್ನು ವಿನಿಮಯ ಮಾಡಿಕೊಂಡರು. ಭಾರತದ ಪ್ರಾಚೀನ ಸಂಸ್ಕೃತಿ, ಪಾರಂಪರಿಕ ಮೌಲ್ಯಗಳು ಹಾಗೂ ಭಾರತೀಯ ಜ್ಞಾನ ಪದ್ಧತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ‘ಭಾರತ್ ಸೇವಾ’ ಒಂದು ಕಾರ್ಯನಿರ್ವಹಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಲತಾ ರಜನಿಕಾಂತ್ ನೇತೃತ್ವದ ಶ್ರೀ ದಯಾ ಫೌಂಡೇಶನ್ ಮೂಲಕ ‘ಭಾರತ ಸೇವಾ’ ಎಂಬ ಬೃಹತ್ ಅಭಿಯಾನವನ್ನು ರೂಪಿಸಲಾಗಿದ್ದು, ಇದು ದೇಶದ ಪಾರಂಪರಿಕ ಮೌಲ್ಯಗಳನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ತತ್ವಗಳು ಹಾಗೂ ದೇಶದ ಸಾಂಪ್ರದಾಯಿಕ ಕೌಶಲಗಳನ್ನು ಪ್ರಚುರಪಡಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ?: ಮೊಬೈಲ್ ಬೆಲೆ ಇಳಿಕೆಗೆ ಕೇಂದ್ರಕ್ಕೆ ಐಸಿಇಎ ಮಹತ್ವದ ಮನವಿ
‘ಭಾರತ್ ಮಾರ್ಕೆಟ್’ ನಂತಹ ವೇದಿಕೆಗಳ ಮೂಲಕ ದೇಶದ ಗ್ರಾಮೀಣ ಕುಶಲಕರ್ಮಿಗಳು, ರೈತರು ಮತ್ತು ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸಿ, ಸ್ವದೇಶಿ ಉತ್ಪನ್ನಗಳ ಬಳಕೆಗೆ ‘ಭಾರತ್ ಸೇವಾ’ ಒತ್ತು ನೀಡುತ್ತಿದೆ. ಮಕ್ಕಳ ಶಿಕ್ಷಣ, ನೈತಿಕ ಮೌಲ್ಯವರ್ಧನೆ ಮತ್ತು ಸಾಮಾಜಿಕ ಭದ್ರತೆಗಾಗಿ ‘ಪೀಸ್ ಫಾರ್ ಚಿಲ್ಡ್ರನ್’ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಸುದೀರ್ಘ ಸೇವೆಯನ್ನು ಸಲ್ಲಿಸಲಾಗುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

