Breaking News

ಬಿರಿಯಾನಿ ಅಂಗಡಿಯ ಫ್ರೀಝರ್‌ನಲ್ಲಿ ಯುವಕನ ಶವ ಪತ್ತೆ!

ಅಂಗಡಿ ಮಾಲೀಕ ಶನಿ ರಾವತ್ ಅವರ ತಂದೆ ನಿಧನರಾಗಿದ್ದರಿಂದ, ಕಳೆದ ನಾಲ್ಕು ದಿನಗಳಿಂದ ಅಂಗಡಿಗೆ ಬೀಗ ಹಾಕಲಾಗಿತ್ತು. ಭಾನುವಾರ (ಮಾರ್ಚ್ 1) ಬೆಳಿಗ್ಗೆ ಮಾಲೀಕರು ಅಂಗಡಿ ತೆರೆದು ಸಾಮಾನುಗಳನ್ನು ಪರಿಶೀಲಿಸಲು ಫ್ರೀಝರ್ ತೆರೆದಾಗ ಈ ಭೀಕರ ದೃಶ್ಯ ಕಂಡುಬಂದಿದೆ.ಫ್ರೀಝರ್‌ನಲ್ಲಿದ್ದ ಶವದ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ಆಧಾರದ ಮೇಲೆ ಮೃತನನ್ನು ವಿಜಯ್ ಪಾಲ್ (35) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಅಂಗಡಿ ನಾಲ್ಕು ದಿನಗಳಿಂದ ಮುಚ್ಚಲ್ಪಟ್ಟಿತ್ತು. ಹಾಗಿದ್ದರೂ ವಿಜಯ್ ಪಾಲ್ ಅವರ ಶವ ಫ್ರೀಝರ್ ಒಳಗೆ ಹೇಗೆ ಹೋಯಿತು ಎಂಬುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.ಪೊಲೀಸರು ಅಂಗಡಿಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ವಿಜಯ್ ಪಾಲ್ ಯಾವಾಗ ಅಂಗಡಿಯ ಒಳಗೆ ಪ್ರವೇಶಿಸಿದರು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

Advertisement

ಇದನ್ನೂ ಓದಿ: ಕೊಡಗು: ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ, ಬಿಜೆಪಿಯಿಂದ ಖಂಡನೆ

ಪ್ರಾಥಮಿಕ ವರದಿಗಳ ಪ್ರಕಾರ, ಮೃತ ದೇಹದ ಮೇಲೆ ಯಾವುದೇ ಗಂಭೀರ ಗಾಯದ ಗುರುತುಗಳಿಲ್ಲ. ವಿಜಯ್ ಪಾಲ್ ಅವರು ಪತ್ನಿಯಿಂದ ಬೇರ್ಪಟ್ಟ ನಂತರ ಮದ್ಯಪಾನಕ್ಕೆ ದಾಸರಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಇದು ಆಕಸ್ಮಿಕ ಸಾವೇ ಅಥವಾ ಕೊಲೆಯೇ ಎಂಬುದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು