ಮಂಗಳೂರು: ಕರಾವಳಿಯ ಜನಪ್ರಿಯ ಹೋಟೆಲ್ಗಳಲ್ಲಿ ಒಂದಾದ ಮಂಗಳೂರಿನ ‘ಸ್ವಾಗತ್ ಹೋಟೆಲ್’ನಲ್ಲಿ ಇಂದಿನಿಂದ ಮಧ್ಯಾಹ್ನದ ಊಟದ ಸೇವನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಹೋಟೆಲ್ನಲ್ಲಿ ಇರುವ ಅಲ್ಪ ಪ್ರಮಾಣದ ಗ್ಯಾಸ್ ದಾಸ್ತಾನನ್ನು ಬಳಸಿಕೊಂಡು ಕೇವಲ ಬೆಳಗಿನ ಉಪಹಾರ (Breakfast) ಮಾತ್ರ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಹೋಟೆಲ್ನಲ್ಲಿ ಸದ್ಯ ಇನ್ನೆರಡು ದಿನಗಳಿಗೆ ಮಾತ್ರ ಆಗುವಷ್ಟು ಗ್ಯಾಸ್ ಸ್ಟಾಕ್ ಇದೆ. ಹೊಸ ಸಿಲಿಂಡರ್ಗಳ ಪೂರೈಕೆಯಾಗದಿದ್ದರೆ ಸಂಪೂರ್ಣವಾಗಿ ಹೋಟೆಲ್ ಬಂದ್ ಮಾಡಬೇಕಾದ ಭೀತಿ ಎದುರಾಗಿದೆ. ಹೆಚ್ಚು ಗ್ಯಾಸ್ ವ್ಯಯವಾಗುವ ಮಧ್ಯಾಹ್ನದ ಊಟದ (Lunch) ತಯಾರಿಕೆಯನ್ನು ಇಂದಿನಿಂದಲೇ ನಿಲ್ಲಿಸಲಾಗಿದೆ. ಸಮರ್ಪಕ ಪೂರೈಕೆಯಾದ ನಂತರವಷ್ಟೇ ಮತ್ತೆ ಊಟದ ಸೇವೆ ಆರಂಭವಾಗಲಿದೆ.

ಇದನ್ನೂ ಓದಿ: ಪುತ್ತೂರು ಫುಡ್ ಫೆಸ್ಟ್ಗೂ ತಟ್ಟಿದ ಗ್ಯಾಸ್ ಕಂಟಕ: ಸಿಲಿಂಡರ್ ಅಭಾವದಿಂದ ಆಹಾರ ಉತ್ಸವ ಮುಂದೂಡಿಕೆ!
ಮಂಗಳೂರಿನ ಇತರ ಹಲವು ಹೋಟೆಲ್ಗಳು ಕೂಡ ಇದೇ ಹಾದಿಯನ್ನು ಅನುಸರಿಸುವ ಸಾಧ್ಯತೆ ಇದ್ದು, ಗ್ರಾಹಕರು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

