ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಆಘಾತಕಾರಿ ಘಟನೆಯೊಂದು ತಡರಾತ್ರಿ ನಡೆದಿದೆ. ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮಂಗಳೂರಿನ ಕೋಡಿಕಲ್ ಜಂಕ್ಷನ್ ಬಳಿ ಭಾನುವಾರ ತಡರಾತ್ರಿ ಈ ಘಟನೆ ಜರುಗಿದೆ. ಉರ್ವಾ ಠಾಣೆಯ ಕಾನ್‌ಸ್ಟೆಬಲ್ ಹನುಮಂತ್ ಕಾಂತಿ ಹಲ್ಲೆಗೊಳಗಾದ ದುರ್ದೈವಿ.
ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಕೋಡಿಕಲ್‌ನ ನಾರಾಯಣ ಗುರು ಸಹಕಾರಿ ಸಂಘದ ಕಟ್ಟಡದ ಬಳಿ ಕಾನ್‌ಸ್ಟೆಬಲ್ ಹನುಮಂತ್ ಮತ್ತು ಗೃಹರಕ್ಷಕ ದಳದ (Home Guard) ಸಿಬ್ಬಂದಿ ಬಸವರಾಜ್ ಅವರು ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ಪೊಲೀಸರನ್ನು ಕಂಡು ಹೆದರಿದ ಸವಾರರು ಗಾಡಿ ನಿಲ್ಲಿಸದೇ ಅಲ್ಲಿಂದ ತಲೆತಪ್ಪಿಸಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
A pillion rider on a motorcycle struck a 35-year-old police constable on the head before fleeing the scene in Kodical in the early hours of Sunday.
Urwa police said constable Hanumanth Kanti was on duty along with home guard Basavaraj to check suspicious vehicle movement in the… https://t.co/cBWvZcKR4c pic.twitter.com/yObFUyefaT
— Hate Detector 🔍 (@HateDetectors) May 24, 2026
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮತ್ತದೇ ಸ್ಥಳಕ್ಕೆ ಅತ್ಯಂತ ಸ್ಕೆಚ್ ಹಾಕಿ ಹಿಂತಿರುಗಿದ ಬೈಕ್ ಸವಾರರು, ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಹನುಮಂತ್ ಅವರ ತಲೆಗೆ ಹಿಂಬದಿಯಿಂದ ಬಲವಾಗಿ ಹೊಡೆದು ಜೀವ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾರೆ. ರಕ್ತದ ಮಡುವಿನಲ್ಲಿ ಗಾಯಗೊಂಡಿದ್ದರೂ ಸಿಬ್ಬಂದಿ ಹಲ್ಲೆಕೋರರನ್ನು ಹಿಡಿಯಲು ತೀವ್ರ ಪ್ರಯತ್ನ ನಡೆಸಿದರಾದರೂ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಲೆಗೆ ಸಣ್ಣಪುಟ್ಟ ಗಾಯಗಳಾಗಿರುವ ಹನುಮಂತ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ‘ಎಬೋಲಾ ವೈರಸ್’ ಹೈ ಅಲರ್ಟ್!: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಠಿಣ ಸ್ಕ್ರೀನಿಂಗ್ ಪ್ರೋಟೋಕಾಲ್ ಜಾರಿ
ಇಡೀ ಭೀಕರ ದಾಳಿಯ ದೃಶ್ಯವು ಸ್ಥಳೀಯ ಅಂಗಡಿಯೊಂದರ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ತೀಕ್ಷ್ಣವಾಗಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಉರ್ವಾ ಠಾಣೆ ಪೊಲೀಸರು, ಕರ್ತವ್ಯ ನಿರತ ಸಾರ್ವಜನಿಕ ನೌಕರನ ಮೇಲೆ ಹಲ್ಲೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (BNS – ಕೊಲೆ ಯತ್ನ) ಅಡಿಯಲ್ಲಿ ಕಠಿಣ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ನಗರದಾದ್ಯಂತ ತೀವ್ರ ಜಾಲ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


