Breaking News

ಸಂಸದೀಯ ಸಮಿತಿ ತೀವ್ರ ಎಚ್ಚರಿಕೆ: ಕೊನೆಗೂ ಕ್ಷಮೆಯಾಚಿಸಿದ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್

ದೆಹಲಿ : ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಉಂಟಾದ ತಾಂತ್ರಿಕ ಲೋಪಗಳು, ಅಪ್ರಾಪ್ತರ ಶೋಷಣೆಯ ವಿಷಯಗಳು (CSAM) ಹಾಗೂ ಡೀಪ್‌ಫೇಕ್ ದೃಶ್ಯಾವಳಿಗಳ ನಿಯಂತ್ರಣದಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮೆಟಾ (Meta) ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಸಂಸದೀಯ ಸಮಿತಿಯು ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ಹಾಗೂ ತೀವ್ರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೆಟಾ ಸಂಸ್ಥೆ ತನ್ನ ನಿರ್ವಹಣಾ ಲೋಪಗಳನ್ನು ಒಪ್ಪಿಕೊಂಡು ಬಾಗಿದೆ.

ಐಟಿ ಕಾಯ್ದೆಯಡಿ (Section 79) ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಲಭ್ಯವಿದ್ದ ‘ಸೇಫ್ ಹಾರ್ಬರ್’ (Safe Harbour) ರಕ್ಷಣೆ ಮೆಟಾ ಸಂಸ್ಥೆಗೆ ಇನ್ಮುಂದೆ ಅನ್ವಯಿಸುವುದಿಲ್ಲ ಎಂಬುದನ್ನು ಸಂಸದೀಯ ಸಮಿತಿ ಸ್ಪಷ್ಟಪಡಿಸಿದೆ. ಸಂಸ್ಥೆಯು ಕೇವಲ ಮಧ್ಯವರ್ತಿಯಾಗಿ ಉಳಿದಿಲ್ಲ, ಬದಲಿಗೆ ನಿರ್ದಿಷ್ಟ ಕಂಟೆಂಟ್‌ಗಳನ್ನು ಉತ್ತೇಜಿಸಲು ಮತ್ತು ಬಳಕೆದಾರರಿಗೆ ತಲುಪಿಸಲು ಹಸ್ತಕ್ಷೇಪ ಮಾಡುತ್ತಿರುವುದು ಬಯಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ವಾಟ್ಸಾಪ್‌ ಶಾಕ್: ಮುನ್ಸೂಚನೆ ಇಲ್ಲದೆ ‘24 ಗಂಟೆಗಳ ರಿವ್ಯೂ’ಗೆ ಬ್ಲಾಕ್ ಆದ ಬಳಕೆದಾರರ ಖಾತೆಗಳು

ನಿರ್ದಿಷ್ಟ ಬಗೆಯ ವಿಷಯಗಳನ್ನು (Content) ಹೆಚ್ಚಿನ ಜನರಿಗೆ ತಲುಪಿಸಲು ಹಣವನ್ನು ಪಡೆಯಲಾಗಿತ್ತು ಎಂಬುದನ್ನು ಸಂಸ್ಥೆ ಒಪ್ಪಿಕೊಂಡಿದ್ದು, ಈ ತಪ್ಪಿಗಾಗಿ ಕ್ಷಮೆಯಾಚಿಸಿ ವಿಷಾದ ವ್ಯಕ್ತಪಡಿಸಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *