ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ!: ದೇಶದ ಮೊದಲ 100% ಎಥನಾಲ್ ಚಾಲಿತ ‘ಮಾರುತಿ ವ್ಯಾಗನ್ಆರ್ ಫ್ಲೆಕ್ಸ್-ಫ್ಯುಯೆಲ್’ ಕಾರ್ ಬಿಡುಗಡೆ

ನವದೆಹಲಿ: ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki), ದೇಶದ ಆಟೋಮೊಬೈಲ್ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ದೇಶದ ಸಾಮಾನ್ಯ ಜನರಿಗಾಗಿ ಮೊದಲ ಬಾರಿಗೆ 100% ಶುದ್ಧ ಎಥನಾಲ್ (E100) ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮೊದಲ ಮಾಸ್-ಮಾರ್ಕೆಟ್ ಪ್ಯಾಸೆಂಜರ್ ಕಾರ್ ‘ವ್ಯಾಗನ್ಆರ್ ಫ್ಲೆಕ್ಸ್-ಫ್ಯುಯೆಲ್’ (WagonR Flex-Fuel) ಅನ್ನು ಬಿಡುಗಡೆ ಮಾಡಿದೆ.

ಪರಿಸರ ಮಾಲಿನ್ಯಕ್ಕೆ ಬಿಗ್ ಬ್ರೇಕ್, ಆಮದು ವೆಚ್ಚಕ್ಕೆ ಬ್ರೇಕ್!:

ಈ ಅತ್ಯಾಧುನಿಕ ತಂತ್ರಜ್ಞಾನದ ಕಾರು ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಭಾರತದ ಹಸಿರು ಇಂಧನ (Green Fuel) ಯೋಜನೆಗೆ ದೊಡ್ಡ ವೇಗ ನೀಡಲಿದೆ. ಅಷ್ಟೇ ಅಲ್ಲದೆ, ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಕಚ್ಚಾ ತೈಲದ (Crude Oil) ಮೇಲಿನ ಅವಲಂಬನೆಯನ್ನು ತಗ್ಗಿಸಿ, ದೇಶದ ಕೋಟ್ಯಂತರ ರೂಪಾಯಿ ಆಮದು ವೆಚ್ಚವನ್ನು ಉಳಿಸಲು ಇದು ನೆರವಾಗಲಿದೆ.

ಇದನ್ನೂ ಓದಿ:ಪ್ರವಾಸೋದ್ಯಮ ಕ್ಷೇತ್ರ ಇನ್ಮುಂದೆ ಸಂಪೂರ್ಣ ‘ಎಐ’ ಮಯ!

ರೈತರ ಆದಾಯಕ್ಕೆ ಸಿಗಲಿದೆ ಆನೆ ಬಲ:

ಈ ಕಾರಿಗೆ ಬಳಸಲಾಗುವ ಎಥನಾಲ್ ಅನ್ನು ಪ್ರಮುಖವಾಗಿ ಕಬ್ಬು, ಧಾನ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ (Bio-waste) ತಯಾರಿಸಲಾಗುತ್ತದೆ. ಹೀಗಾಗಿ, ದೇಶದಲ್ಲಿ ಎಥನಾಲ್ ಇಂಧನದ ಬಳಕೆ ಹೆಚ್ಚಾದಷ್ಟೂ ಭಾರತದ ಅನ್ನದಾತರಾದ ರೈತರ ಆದಾಯಕ್ಕೆ ದೊಡ್ಡ ಬಲ ಸಿಗಲಿದೆ. ಆಟೋಮೊಬೈಲ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಮ್ಮಿಕೊಂಡಿರುವ ‘ಆತ್ಮನಿರ್ಭರ್ ಭಾರತ್’ ಅಭಿಯಾನಕ್ಕೆ ಮಾರುತಿ ಸುಜುಕಿ ಸಂಸ್ಥೆಯ ಈ ಕ್ರಾಂತಿಕಾರಿ ಹೆಜ್ಜೆ ಮತ್ತಷ್ಟು ಶಕ್ತಿ ತುಂಬಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು