ಬೆಂಗಳೂರು: ಪ್ರಸ್ತುತ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನವು ಹೊಸ ಕ್ರಾಂತಿ ಸೃಷ್ಟಿಸುತ್ತಿದೆ. ಇದೀಗ ಇದೇ ಹಾದಿಯಲ್ಲಿ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ (Travel and Tourism) ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಜಾಗತಿಕ ಟೆಕ್ ದೈತ್ಯ ಸಂಸ್ಥೆ ‘ಕಾಗ್ನಿಜೆಂಟ್’ (Cognizant), ಪ್ರಮುಖ ಟ್ರಾವೆಲ್ ಮೂಲಸೌಕರ್ಯ ಒದಗಿಸುವ ‘ಟ್ರಾವೆಲ್‌ಪೋರ್ಟ್’ (Travelport) ಹಾಗೂ ಪ್ರಸಿದ್ಧ ಎಐ ಸಂಶೋಧನಾ ಸಂಸ್ಥೆ ‘ಆಂಥ್ರೋಪಿಕ್’ (Anthropic) ಕೈಜೋಡಿಸಿವೆ. ಹಳೆಯ ಮತ್ತು ಸಾಂಪ್ರದಾಯಿಕ ಟ್ರಾವೆಲ್ ತಂತ್ರಜ್ಞಾನಗಳನ್ನು ಆಧುನೀಕರಿಸಿ, ಗ್ರಾಹಕರಿಗೆ ಅತ್ಯಂತ ವೇಗದ ಸೇವೆ ನೀಡುವುದು ಈ ಮೂರು ಪ್ರಮುಖ ಸಂಸ್ಥೆಗಳ ಜಂಟಿ ಪಾಲುದಾರಿಕೆಯ ಮುಖ್ಯ ಉದ್ದೇಶವಾಗಿದೆ.
ಈ ಬೃಹತ್ ಯೋಜನೆಗಾಗಿ ಕಾಗ್ನಿಜೆಂಟ್ ಸಂಸ್ಥೆಯು, ಆಂಥ್ರೋಪಿಕ್ ಅಭಿವೃದ್ಧಿಪಡಿಸಿರುವ ವಿಶ್ವದಕ್ಷ ‘ಕ್ಲೌಡ್’ (Claude AI) ಮಾಡೆಲ್ ಅನ್ನು ಬಳಸಿಕೊಳ್ಳಲಿದೆ. ಈ ಸುಧಾರಿತ ತಂತ್ರಜ್ಞಾನದ ಮೂಲಕ ‘ಟ್ರಾವೆಲ್‌ಪೋರ್ಟ್’ನ ಬುಕ್ಕಿಂಗ್ ಸಾಫ್ಟ್‌ವೇರ್‌ಗಳನ್ನು ಕಾಗ್ನಿಜೆಂಟ್ ಪುನರ್ ರೂಪಿಸಲಿದ್ದು, ಅದರ ಸಂಪೂರ್ಣ ನಿರ್ವಹಣೆ ಮತ್ತು ಪರೀಕ್ಷೆಯ ಜವಾಬ್ದಾರಿಯನ್ನು ಹೊರಲಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು (Airlines), ಹೋಟೆಲ್‌ಗಳು ಮತ್ತು ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳಿಗೆ (OTAs) ಅತ್ಯಾಧುನಿಕ ಎಐ ಆಧಾರಿತ ಸೇವೆಗಳು ಅತ್ಯಂತ ತ್ವರಿತವಾಗಿ ಲಭ್ಯವಾಗಲಿವೆ.
ಇದನ್ನೂ ಓದಿ: ತಂತ್ರಜ್ಞಾನ ಬಳಕೆಯ ನಡುವೆ ಚಿಂತನಾ ಶಕ್ತಿ ಕಾಪಾಡಿಕೊಳ್ಳಿ: ಅತುಲ್ ಭಟ್
ಇಂದಿನ ದಿನಗಳಲ್ಲಿ ಸಾಮಾನ್ಯ ಗ್ರಾಹಕರು ತಮ್ಮ ಪ್ರವಾಸವನ್ನು ಪ್ಲಾನ್ ಮಾಡಲು ಚಾಟ್‌ಜಿಪಿಟಿ ಅಥವಾ ಕ್ಲೌಡ್‌ನಂತಹ ಎಐ ಟೂಲ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅವರಿಗೆ ಅಧಿಕೃತವಾಗಿ ಟಿಕೆಟ್ ಬುಕ್ ಮಾಡಿಕೊಡುವ ಟ್ರಾವೆಲ್ ಏಜೆನ್ಸಿಗಳ ಆಂತರಿಕ ಸಿಸ್ಟಮ್‌ಗಳು (Backend Systems) ಇನ್ನೂ ಹಳೆಯ ಕಾಲದ ತಂತ್ರಜ್ಞಾನದ ಮೇಲೆಯೇ ನಡೆಯುತ್ತಿವೆ. ಇದರಿಂದಾಗಿ ಟ್ರಾವೆಲ್ ಏಜೆಂಟ್‌ಗಳು ಇಂದಿಗೂ ಮ್ಯಾನುಯಲ್ ಆಗಿ ಕಷ್ಟಪಟ್ಟು ಟಿಕೆಟ್ ಬುಕ್ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ಇರುವ ಇದೇ ತಾಂತ್ರಿಕ ಅಂತರವನ್ನು (Tech Gap) ಇಲ್ಲದೂಡಿಸಲು ಈ ಹೊಸ ಮೈತ್ರಿ ಮುಂದಾಗಿದ್ದು, ಭವಿಷ್ಯದಲ್ಲಿ ಟ್ರಾವೆಲ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


