ಕಾರಾಗೃಹ ಇಲಾಖೆಯ ಕೋಟ್ಯಂತರ ರೂ. ಬೆಲೆಬಾಳುವ ಜಾಗ ಕಬ್ಜ!; ವಕೀಲ ಅನಿಲ್, ಖಲಿಂ ವಿರುದ್ಧ ಅತಿಕ್ರಮಣದ ಗಂಭೀರ ಆರೋಪ!

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಸರ್ಕಾರಿ ಆಸ್ತಿಗಳಿಗೂ ಈಗ ರಕ್ಷಣೆಯಿಲ್ಲದಂತಾಗಿದೆ. ಸಾರ್ವಜನಿಕರ ಆಸ್ತಿಯನ್ನು ಕಾಯಬೇಕಾದ ವ್ಯವಸ್ಥೆಯ ಕಣ್ಣೆದುರೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ‘ಮೈಸೂರು ಡಿಸ್ಚಾರ್ಜ್ಡ್ ಪ್ರಿಸನರ್ಸ್ ಏಡ್ ಸೊಸೈಟಿ’ಗೆ (Mysore Discharged Prisoners’ Aid Society) ಸೇರಿದ ಆಸ್ತಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈ ಅಮೂಲ್ಯವಾದ ಆಸ್ತಿಯು ನೇರವಾಗಿ ಕಾರಾಗೃಹ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ಈ ಇಲಾಖೆಯ ಕಣ್ಣೆದುರೇ ಅಮೂಲ್ಯವಾದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ತಮ್ಮ ವಶಕ್ಕೆ ಪಡೆದುಕೊಂಡು ಕಬ್ಜ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವ ಕಾಂಗ್ರೆಸ್ ನಾಯಕನ ಬರ್ಬರ ಹತ್ಯೆ: ಧಾರವಾಡದಲ್ಲಿ ನಡುರಾತ್ರಿ ನಡೆದಿದ್ದೇನು?

 ಈ ಆಸ್ತಿ ಅತಿಕ್ರಮಣ ಪ್ರಕರಣದಲ್ಲಿ ಮುಖ್ಯವಾಗಿ ಇಬ್ಬರ ಹೆಸರು ಕೇಳಿಬಂದಿದೆ. ಅನಿಲ್ ಎಂಬ ವಕೀಲರು ಹಾಗೂ ಖಲಿಂ ಎಂಬ ವ್ಯಕ್ತಿ ಈ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಕೀಲ ಅನಿಲ್ ಅವರು ಸರ್ಕಾರದ ಯಾವುದೇ ಅನುಮತಿ ಅಥವಾ ಲೀಸ್ ಪಡೆಯದೇ ಕಟ್ಟಡದ ಮೊದಲ ಮಹಡಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರೆ, ಇತ್ತ ಖಲಿಂ ಎಂಬ ವ್ಯಕ್ತಿ ಹಳೆಯ ಸಾಮಗ್ರಿಗಳನ್ನು (Scrap materials) ತಂದು ಹಾಕಿ ಇಡೀ ಆವರಣವನ್ನು ತನ್ನ ಸ್ವಂತ ಸೊತ್ತಿನಂತೆ ಬಳಸಿಕೊಳ್ಳುತ್ತಿದ್ದಾನೆ ಎಂಬ ಗಂಭೀರ ದೂರು ಕೇಳಿಬಂದಿದೆ. ಹೃದಯಭಾಗದಲ್ಲಿರುವ ಸರ್ಕಾರಿ ಜಾಗವನ್ನು ಇಲಾಖೆ ತಕ್ಷಣವೇ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು