Breaking News

ಶ್ರೀಕ್ಷೇತ್ರ ಗೆಜ್ಜೆಗಿರಿಗೆ 5 ಕೋಟಿ ಅನುದಾನ ನೀಡುವಂತೆ ಸಿಎಂಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಶ್ರೀಕ್ಷೇತ್ರ ಗೆಜ್ಜೆಗಿರಿ ಇದರ ಅಭಿವೃದ್ಧಿಗೆ ೫ ಕೋಟಿ ರೂ. ಅನುದಾನ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು. ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಶಾಸಕರು, ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯರ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿಸುವಲ್ಲಿ ಮತ್ತು ಈ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ವೇಳೆ ಅವರಿಗೆ ಮೂಲಸೌಕರ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಈ ಕಾರಣಕ್ಕೆ ಕ್ಷೇತ್ರಕ್ಕೆ ಅನುದಾನ ನೀಡಿವಂತೆ ಮನವಿ ಮಾಡಿದ್ದಾರೆ.

ಒಡಿಯೂರು, ಮಾಣಿಲ ಮಠಕ್ಕೆ ತಲಾ 1 ಕೋಟಿ ಅನುದಾನಕ್ಕೆ ಮನವಿ

Advertisement

ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮಠಗಳ ಪೈಕಿ ಹಲವು ಮಠಗಳಿಗೆ ಇದುವರೆಗೂ ಯಾವುದೇ ಸರಕಾರ ಸಹಾಯಹಸ್ತ ನೀಡದೇ ಇರುವ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದ ಶಾಸಕರು, ಒಡಿಯೂರು ಗುರುದೇವ ಸಂಸ್ಥಾನಂ ಮಠ ಹಾಗೂ ಮಾಣಿಲ ಶ್ರೀಧಾಮ ಮಠಕ್ಕೆ ತಲಾ ಒಂದು ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದರು. ಇದರ ಜತೆಗೆ ಪಿಲಿಕುಲ ಗಾಲ್ಫ್ ಕ್ಲಬ್ ಗೆ ರೂ 5 ಕೋಟಿ ಅನುದಾನ ನೀಡುವಂತೆ ಕೂಡ ಮನವಿ ಮಾಡಿದ್ದಾರೆ,

ಇದನ್ನೂ ಓದಿ: ಪುತ್ತೂರು ಬಾರ್ ಅಸೋಸಿಯೇಶನ್‌ಗೆ 1ಕೋಟಿ, 2 ಮಸೀದಿಗಳಿಗೆ 55 ಲಕ್ಷ ಮಂಜೂರು: ಅಶೋಕ್ ರೈ

ತಾತ್ವಕ ಒಪ್ಪಿಗೆ ಸೂಚಿಸಿದ ಸಿಎಂ

ಈ ಎರಡು ಮಠಗಳು ಸೇರಿದಂತೆ ಇನ್ನಿತರ ಪ್ರಮುಖ ಮಠಗಳಿಗೂ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಇದುವರೆಗೂ ಯಾವುದೇ ಸರಕಾರಗಳು ಮಠಗಳಿಗೆ ಇಷ್ಟೊಂದು ಮೊತ್ತದ ನೆರವು ನೀಡಿರಲಿಲ್ಲ. ಶಾಸಕರ ಮನವಿಗೆ ಮುಖ್ಯಮಂತ್ರಿಯವರು ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು