ಪುತ್ತೂರು ಬಾರ್ ಅಸೋಸಿಯೇಶನ್‌ಗೆ 1ಕೋಟಿ, 2 ಮಸೀದಿಗಳಿಗೆ 55 ಲಕ್ಷ ಮಂಜೂರು: ಅಶೋಕ್ ರೈ

ಪುತ್ತೂರು: ಪುತ್ತೂರಿನ ಆನೆಮಜಲಿನಲ್ಲಿರುವ ಹೊಸ ನ್ಯಾಯಾಲಯ ಕಟ್ಟಡದಲ್ಲಿರುವ ಬಾರ್ ಅಸೋಸಿಯೇಶನ್‌ಗೆ ಲೊಕೋಪಯೋಗಿ ಇಲಾಖೆಯಿಂದ ಒಂದು ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಬಾರ್ ಅಸೋಸಿಯೇಶನ್ ಕಟ್ಟಡದ ಫೀಠೋಪಕರಣ, ಕಂಪ್ಯೂಟರ್ ಉಪಕರಣ ಮತ್ತು ಗ್ರಂಥಾಲಯಕ್ಕೆ ಸಲಕರಣೆ ಅಳವಡಿಸುವ ಕಾಮಗಾರಿಗೆ ಈ ಅನುದಾನ ಮಂಜೂರುಗೊಂಡಿದೆ.ಬಾರ್ ಅಸೋಸಿಯೇಶನ್ ಕಟ್ಟಡಕ್ಕೆ ಸಲಕರಣೆಗಳ ಖರೀದಿಗೆ ಅನುದಾನ ನೀಡುವಂತೆ ವಕೀಲರ ಸಂಘದ ವತಿಯಿಂದ ಶಾಸಕ ಅಶೋಕ್ ರಐ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಶಾಸಕರು ಈ ಬಗ್ಗೆ ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನಕ್ಕೆ ಮನವಿ ಮಾಡಿದ್ದರು. ಇಲಾಖೆಯಿಂದ ಈ ಅನುದಾನ ಮಂಜೂರುಗೊಂಡಿದೆ ಎಂದರು.

ಎರಡು ಮಸೀದಿಗೆ 55 ಲಕ್ಷ ಅನುದಾನ

ಕರ್ನಾಟಕ ರಾಜ್ಯ ವಕಫ್ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಮಸೀದಿಗೆ ಒಟ್ಟು 55 ಲಕ್ಷ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಅಶೋಕ್ ರೈ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ನೂತನ ಶೌಚಾಲಯ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ

ಇಂದು ಬೆಂಗಳೂರಿನಲ್ಲಿ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾದ ಶಾಸಕರು ಎರಡು ಮಸೀದಿಗೆ ಸಂಬಂದಪಟ್ಟಂತೆ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ವೆಲು ಬದ್ರಿಯಾ ಜುಮಾ ಮಸೀದಿಯಲ್ಲಿ ನೂತನ ವಿಸ್ತೃತ ಕಟ್ಟಡ ನಿರ್ಮಾಣಕ್ಕೆ 35 ಲಕ್ಷ ಹಾಗೂ ಇಡ್ಕಿದು ಬದ್ರಿಯಾ ಜುಮಾ ಮಸೀದಿಯಲ್ಲಿ ಶೌಚಾಲಯ ಮತ್ತು ಶುದ್ಧಕುಡಿಯುವ ನೀರಿನ ವ್ಯವಸ್ಥೆಗೆ 20 ಲಕ್ಷ ಅನುದಾನ ಮಂಜೂರುಗೊಂಡಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲದಿನಗಳ ಹಿಂದೆ ಕರ್ವೆಲು ಮಸೀದಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರು ಮಸೀದಿಗೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು